ನನಗೂ ಸಚಿವನಾಗುವ ಆಸೆ ಇದೆ

ಕೆ.ಆರ್.ಸಾಗರ ಶ್ರೀ ರಾಮಾನಂಜುನೇಯ ದೇವಾಲಯದಲ್ಲಿ ಬಳಿಯ ಅರಳಿಕಟ್ಟೆಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಫುಡ್ ಕಿಟ್ ವಿತರಿಸಿದರು.  ಪಕ್ಷದ ಮುಖಂಡರು, ಗ್ರಾ.ಪಂ ಮಾಜಿ ಸದಸ್ಯರು ಗ್ರಾಮಸ್ಥರು ಇತರರು ಇದ್ದರು.
ಕೆ.ಆರ್.ಸಾಗರ ಶ್ರೀ ರಾಮಾನಂಜುನೇಯ ದೇವಾಲಯದಲ್ಲಿ ಬಳಿಯ ಅರಳಿಕಟ್ಟೆಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಫುಡ್ ಕಿಟ್ ವಿತರಿಸಿದರು. ಪಕ್ಷದ ಮುಖಂಡರು, ಗ್ರಾ.ಪಂ ಮಾಜಿ ಸದಸ್ಯರು ಗ್ರಾಮಸ್ಥರು ಇತರರು ಇದ್ದರು.
Published on
ಕೆ.ಆರ್.ಸಾಗರ: ನನಗೆ ಕೂಡ ಸಚಿವನಾಗಬೇಕು ಎಂಬ ಆಸೆ ಇದೆ. ಹಕ್ಕು ಕೂಡ ಇದೆ. ಯಾರಿಗೆ ಸಚಿವನಾಗಲು ಆಸೆ ಇಲ್ಲ. ಆದರೆ ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ಆದೇಶದಂತೆ ನಾನೂ ನಡೆದುಕೊಳ್ಳುತ್ತೇನೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಎಂದು ಹೇಳಿದರು.
ಕೆ.ಆರ್.ಸಾಗರದ 2100 ಕುಟುಂಬಗಳಿಗೆ ಬಂಡಿಸಿದ್ದೇಗೌಡ ಫೌಂಡೇಷನ್ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಫುಡ್ ಕಿಟ್ ವಿತರಣೆಗೆ ಕೆ.ಆರ್.ಸಾಗರದ ಅರಳಿಕಟ್ಟೆಯಲ್ಲಿ ಚಾಲನೆ ನೀಡಿದರು.
ನಮ್ಮ ಪಕ್ಷ ಬಹಳ ಗಟ್ಟಿಯಾಗಿದೆ. ಯಾರಿಗೆ ಯಾವ ಹುದ್ದೇ ನೀಡಬೇಕು? ಎನು ಮಾಡಬೇಕು? ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮನೆಯಲ್ಲಿ ಯಜಮಾನ ತೀರ್ಮಾನ ತೆಗೆದುಕೊಂಡಾಗ ಕೆಲವು ಸಣ್ಣಪುಟ್ಟ ವ್ಯತ್ಯಾಸ ಇರುತ್ತದೆ. ಅದನ್ನು ಸರಿದೂಗಿಸುವುದು ಹೈಕಮಾಂಡ್ ತೀರ್ಮಾನಿಸುತ್ತದೆ. ಆದ್ದರಿಂದ ಸರಿಯಾದ ಸಮಯಲ್ಲಿ ಸರಿಯಾದ ತೀರ್ಮಾನ ದೆಹಲಿ ಪ್ರಮುಖರಿಂದ ಆಗುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ಮತ್ತು ಅಸ್ಸಾಂ ಚುನಾವಣೆ ಉಸ್ತುವಾರಿ ಹಿನ್ನೆಲೆಯಲ್ಲಿ ಸಭೆ ತೀರ್ಮಾನದ ಕಾರಣ ದೆಹಲಿಗೆ ಹೋಗಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ನನಗಿಂತ ದೊಡ್ಡವರು, ಅವರಿಗೆ ಕಷ್ಟ ಬಂದರೆ ಹೈಕಮಾಂಡ್ ಬಳಿ ಹೇಳುತ್ತಾರೆ. ಇದು ಸಹಜ ತಾನೆ? ನಾನು ಅವರ ಬಳಿ ಹೇಳುತ್ತೇನೆ ಎಂದರು.
ಗ್ರಾಮದ ಎಲ್ಲ ಕುಟುಂಬಗಳ ಮನೆ ಬಾಗಿಲಿಗೆ ನಮ್ಮ ಕಾರ್ಯಕರ್ತರ ಮೂಲಕ ಫುಡ್ ಕಿಟ್ ನೀಡಲಾಗುತ್ತದೆ ಇದರಲ್ಲಿ ಭೇದಭಾವವಿಲ್ಲ, ಗ್ರಾಮದ ಅಭಿವೃದ್ಧಿ ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ವಿವಿಧ ಬಡವಾಣೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು 5 ಕೋಟಿ ರೂ. ವೆಚ್ಚದಲ್ಲಿ ಅರಳಿಕಟ್ಟೆಯಲ್ಲಿ ಕ್ಲಾಕ್ ಟವರ್ ಮತ್ತು ಕುಡಿಯುವ ನೀರು ಯೋಜನೆಗೆ ಶೀಘ್ರವಾಗಿ ಚಾಲನೆ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೆಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ನೇತೃತ್ವದಲ್ಲಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾ.ಪಂ ಮಾಜಿ ಸದಸ್ಯರು ಗ್ರಾಮಸ್ಥರು ಇತರರು ಇದ್ದರು.
ಯಾವುದೇ ಒತ್ತಡ ಇಲ್ಲ: ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿನ ಹಿನ್ನೀರಿನ ಪ್ರದೇಶದ ಎರಡು ಭಾಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಕೆಲವು ಕಚೇರಿ ಕೆಲಸದ ಒತ್ತಡದಿಂದ ಸರ್ವೇ ತಡವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಒತ್ತುವರಿ ಗುರುತು ಮಾಡುವುದನ್ನು ತಡೆಯಲು ಒತ್ತಡ ಇಲ್ಲ. ಯಾರೇ ಪ್ರಭಾವಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಲಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net