7 ಚಿನ್ನದ ಪದಕ ಪಡೆದ ಸಿ.ಎನ್.ಅಭಿಷೇಕ್ ಅಭಿನಂದನೆ

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸಿ.ಎನ್.ಅಭಿಷೇಕ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 106ನೇ ಘಟ್ಟಿಕೋತ್ಸವದ ಎಂಎಸ್ಸಿ ಭೂಗೀಳ ಶಾಸ್ತ್ರದಲ್ಲಿ ಏಳು ಚಿನ್ನದ ಪದಕ ಗಳಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿದರು.
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸಿ.ಎನ್.ಅಭಿಷೇಕ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ 106ನೇ ಘಟ್ಟಿಕೋತ್ಸವದ ಎಂಎಸ್ಸಿ ಭೂಗೀಳ ಶಾಸ್ತ್ರದಲ್ಲಿ ಏಳು ಚಿನ್ನದ ಪದಕ ಗಳಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿದರು.
Published on
ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದ ದಿ.ನಿಂಗರಾಜು ಅವರ ಪುತ್ರ ಸಿ.ಎನ್.ಅಭಿಷೇಕ್ ಅವರು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ 106ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ ಇನ್ ಜಿಯೋಲಾಜಿ ವಿಷಯದಲ್ಲಿ 7 ಚಿನ್ನದ ಪದಕ ಪಡೆದು ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರ ಈ ಸಾಧನೆಯನ್ನು ಗುರುತಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸಾಧಕನ ಮನೆ ತಾಲೂಕಿನ ಚಿನಕುರಳಿಗೆ ಆಗಮಿಸಿ ಅಭಿನಂದಿಸಿದರು. ವಿದ್ಯೆ ಸಾಧಕನ ಸ್ವತ್ತು ಎಂಬುದಕ್ಕೆ ಈ ಬಡ ಕುಟುಂಬದ ಸಾಧನೆಯೇ ಸಾಕ್ಷಿ ಎಂದು ಬಣ್ಣಿಸಿದ ಶಾಸಕರು, ಚಿನಕುರಳಿ ಗ್ರಾಮದ ದಿ. ನಿಂಗರಾಜು ಅವರ ಪುತ್ರ ಸಿ.ಎನ್.ಅಭಿಷೇಕ್ ಅವರು ಮೈಸೂರು ವಿಶ್ವವಿದ್ಯಾಲಯದ 106ನೇ ಘಟ್ಟಿಕೋತ್ಸವದಲ್ಲಿ ಎಂ.ಎಸ್‌ಸಿ ಭೂಗೋಳಶಾಸ್ತ್ರದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದು ಮಂಡ್ಯ ಜಿಲ್ಲೆಗೆ ಗೌರವ ತಂದಿದ್ದಾರೆ. ಈ ಸಂದರ್ಭದಲ್ಲಿ ಅವರ, ಮುಂದಿನ ಜೀವನ ಸುಖಕರವಾಗಿರಲಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಭ ಹಾರೈಸಿದರು.
ಈ ವೇಳೆ ರೈತ ಸಂಘದ ಮುಖಂಡರಾದ ಕಾಳೇಗೌಡನಕೊಪ್ಪಲು ವೆಂಕಟೇಶ್, ಚಿನಕುರಳಿ ಪುಟ್ಟೇಗೌಡ, ನಾಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net