ವಿದ್ಯುತ್ ಪ್ರವಹಿಸಿ ರೈತ ಸಾವು

ವಿದ್ಯುತ್ ಪ್ರವಹಿಸಿ ರೈತ ಸಾವು
ವಿದ್ಯುತ್ ಪ್ರವಹಿಸಿ ರೈತ ಸಾವು
Published on
ಕಿಕ್ಕೇರಿ: ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕೆಲಸಕ್ಕೆ ತೆರಳಿದ್ದ ರೈತ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ ಅಣ್ಣಯ್ಯ(58) ಮೃತ ರೈತ. ಇದೇ ಗ್ರಾಮದ ರೈತ ಶಿವಕುಮಾರ್ ಅವರ ಜಮೀನಿನಲ್ಲಿ ಮುಯ್ಯಳಾಗಿ ಕೆಲಸ ಮಾಡಲು ಶುಕ್ರವಾರ ತೆರಳಿದ್ದರು.
ಬಾಯಾರಿಕೆಯಿಂದ ಜಮೀನಿನ ಸಮೀಪದಲ್ಲಿಯೇ ಇದ್ದ ಪಕ್ಕದ ಜಮೀನಿನ ಕೊಳವೆ ಬಾವಿ ಬಳಿ ಹೋಗಿದ್ದ ವೇಳೆ ಕೊಳವೆ ಬಾವಿಗೆ ಅಳವಡಿಸಿದ್ದ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದರು. ಇವರನ್ನು ರಕ್ಷಿಸಿಲು ಹೋಗಿ ಶಿವಕುಮಾರ್ ಸಹ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದರು.
ಇಬ್ಬರನ್ನೂ ತುರ್ತು ಚಿಕಿತ್ಸೆಗೆ ಕಿಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅಷ್ಟರಲ್ಲಾಗಲೇ ಅಣ್ಣಯ್ಯ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತೀವ್ರ ಅಸ್ವಸ್ಥನಾಗಿದ್ದ ಶಿವಕುಮಾರ್ ಅರನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ಪತ್ನಿ ಕಾಂತಮಣಿ ದೂರಿನ ಮೇರೆಗೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ದೇಹ ಒಪ್ಪಿಸಲಾಯಿತು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗ್ರಾಮದ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net