ಹರ್ಷಿತಾಗೆ ಬಿ.ಇಡಿಯಲ್ಲಿ ಪ್ರಥಮ

ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ.ಹರ್ಷಿತಾ ಅವರು ಬಿ.ಇಡಿ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆದು, ತಂದೆ ಯತಿರಾಜು, ತಾಯಿ ಪುಷ್ಪಲತಾ ಅವರೊಂದಿಗೆ ಸಂಭ್ರಮ ಹಂಚಿಕೊಂಡರು.
ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ.ಹರ್ಷಿತಾ ಅವರು ಬಿ.ಇಡಿ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆದು, ತಂದೆ ಯತಿರಾಜು, ತಾಯಿ ಪುಷ್ಪಲತಾ ಅವರೊಂದಿಗೆ ಸಂಭ್ರಮ ಹಂಚಿಕೊಂಡರು.
Published on
ಕಿಕ್ಕೇರಿ: ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ.ಹರ್ಷಿತಾ ಅವರು ಬಿ.ಇಡಿ. ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್‌ಗಳಿಸಿ ಹೋಬಳಿಗೆ ಕೀರ್ತಿ ತಂದಿದ್ದಾರೆ.
ಗ್ರಾಮದ ರೈತಾಪಿ ಕುಟುಂಬದ ಯತಿರಾಜು ಪುಷ್ಪಲತಾ ದಂಪತಿ ಪುತ್ರಿ ಮೈಸೂರಿನ ಬಿಜಿಎಸ್ ಕಾಲೇಜಿನ ಬಿ.ಇಡಿ. ವಿದ್ಯಾರ್ಥಿನಿಯಾಗಿದ್ದು, ಪ್ರಥಮ ರ‌್ಯಾಂಕ್(ಶೇ. 97.9)ನೊಂದಿಗೆ ಎರಡು ಚಿನ್ನದ ಪದಕ, ಎರಡು ನಗದು ಪುರಸ್ಕಾರಗಳು ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಬಿ.ಎಸ್ಸಿ ಪದವಿ ಮುಗಿಸಿ ಬಿ.ಇಡಿ. ವ್ಯಾಸಂಗ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net