ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗ್ರಾಮದ ರಂಜಿತಾ ಅವರು ಬೆಂಗಳೂರಿನ ತಾಯಿ ಮನೆಗೆ ಕಾರಿನಲ್ಲಿ ಹೋಗಿ ಗುರುವಾರ ಸಂಜೆ 5 ಗಂಟೆಗೆ ಸುಮಾರಿಗೆ ವಾಪಸ್ ಶ್ರೀರಂಗಪಟ್ಟಣಕ್ಕೆ ಬರುತ್ತಿದ್ದಾಗ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನ ಚಾಲಕ ಕಿರಣ್ ಅವರು ತಕ್ಷಣ ಕಾರಿನಿಂದ ಇಳಿದು ರಂಜಿತಾ ಅವರನ್ನು ಕಾರಿನಿಂದ ಕೆಳಗಿಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.