ಪ್ರಶ್ನೆಗಳಿಗೆ ಉತ್ತರ ಬರೆಯುವ ತಂತ್ರ ಕಲಿಯಿರಿ

ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಶ್ರೀನಿವಾಸ್ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಎಚ್.ಎಂ.ನಾಗೇಂದ್ರಮೂರ್ತಿ ಇದ್ದರು.
ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಶ್ರೀನಿವಾಸ್ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಎಚ್.ಎಂ.ನಾಗೇಂದ್ರಮೂರ್ತಿ ಇದ್ದರು.
Published on
ಮಳವಳ್ಳಿ: ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಮನದಟ್ಟು ಮಾಡಿಕೊಂಡು ಉತ್ತರ ಬರೆಯುವ ತಂತ್ರ ಕಲಿಯುವ ಮೂಲಕ ಪರೀಕ್ಷೆ ಎದುರಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುರಿತು ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಜತೆ ಚರ್ಚಿಸಿದ ನಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು. ಪರೀಕ್ಷಾ ಸಮಯದ ಮಹತ್ವ ಅರಿತು ಆತಂಕಕ್ಕೊಳಗಾಗದೆ ಅಧ್ಯಯನ ಮಾಡುವಂತೆ ಕರೆ ನೀಡಿದರು.
ಕಲಿಕೆಗೆ ಕಠಿಣ ಪರಿಶ್ರಮ ಅಗತ್ಯ. ಆದರೆ ಅಧ್ಯಯನದ ಸಮಯ ಆಸಕ್ತಿಯಿಂದ ಕೂಡಿರುವಾಗ ಮಾತ್ರ ಪುಸ್ತಕದಲ್ಲಿನ ಪಠ್ಯಕ್ರಮ ಜ್ಞಾಪಕದಲ್ಲಿ ಉಳಿಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಮನಸ್ಸಿಟ್ಟು ಮನನ ಮಾಡುವುದರಿಂದ ಜ್ಞಾನಾರ್ಜನೆ ವೃದ್ಧಿಗೊಳ್ಳಲಿದೆ. ಪರೀಕ್ಷೆಯ ದಿನಗಳು ಸಮೀಪವಾದಂತೆ ಆತಂಕಗೊಳ್ಳದೆ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಚ್.ಎಂ. ನಾಗೇಂದ್ರ ಮೂರ್ತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಗೊಳಿಸಲು ಹಾಕಿಕೊಂಡಿರುವ ಕ್ರಿಯಾಯೋಜನೆ ಹಾಗೂ ಅನುಷ್ಠಾನದ ಕಾರ್ಯಕ್ರಮಗಳ ತಾಪಂ ಇಒಗೆ ಶ್ರೀನಿವಾಸ್‌ಗೆ ವಿವರಿಸಿದರು. ಸಹಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net