ಕುವೆಂಪುಗೆ ಮರಣೋತ್ತರ ಭಾರತರತ್ನ ನೀಡಲಿ

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ವೃತ್ತದಲ್ಲಿ ಮಂಗಳವಾರ ಕುವೆಂಪು ಅವರ 31ನೇ ಪುಣ್ಯಸ್ಮರಣೆ ಹಿನ್ನೆಲೆ ಅವರ ಪುತ್ಥಳಿಗೆ ಕುವೆಂಪು ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಪುಷ್ಪನಮನ ಸಲ್ಲಿಸಿದರು. ವೇಣು,  ಕುಬೇರ, ಬಸವರಾಜು, ರಾಮಕೃಷ್ಣ, ಬಸವರಾಜು ಇದ್ದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ವೃತ್ತದಲ್ಲಿ ಮಂಗಳವಾರ ಕುವೆಂಪು ಅವರ 31ನೇ ಪುಣ್ಯಸ್ಮರಣೆ ಹಿನ್ನೆಲೆ ಅವರ ಪುತ್ಥಳಿಗೆ ಕುವೆಂಪು ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಪುಷ್ಪನಮನ ಸಲ್ಲಿಸಿದರು. ವೇಣು, ಕುಬೇರ, ಬಸವರಾಜು, ರಾಮಕೃಷ್ಣ, ಬಸವರಾಜು ಇದ್ದರು.
Published on
ಶ್ರೀರಂಗಪಟ್ಟಣ: ವಿಶ್ವಮಾನವ ನೀತಿ ಅನುಸರಿಸಿದ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಕುವೆಂಪು ಆಚರಣಾ ಸಮಿತಿ ಅಧ್ಯಕ್ಷ ಸಿ.ಸ್ವಾಮಿಗೌಡ ಒತ್ತಾಯಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ವೃತ್ತದಲ್ಲಿ ಮಂಗಳವಾರ ಕುವೆಂಪು ಅವರ 31ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪುತ್ಥಳಿಗೆ ಕುವೆಂಪು ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸರ್ವಜನಾಂಗದ ಶಾಂತಿಯ ತೋಟ ಎಂಬ ಕವಿಯ ಸಾಲುಗಳ ಭಾವದಂತೆ ಯಾವುದೇ ಧರ್ಮ ಮತ್ತು ಜಾತಿಗೆ ಸೀಮಿತವಾಗಿ ಬದುಕಿದ ವ್ಯಕ್ತಿಯಾಗದ ಕುವೆಂಪು ವಿಶ್ವಮಾನವರಾಗಿ ಶಾಂತಿ-ಸೌಹಾರ್ದ ಸಾರಿದ ಮೇರು ವ್ಯಕ್ತಿತ್ವದ ಜೀವ. ಇಂತಹ ಕವಿ ನಾಡಿಗಾಗಿ, ನಾಡಿನ ಜನತೆಗಾಗಿ ಸಾಹಿತ್ಯದ ಮೂಲಕ ಸಂಸ್ಕೃತಿ, ಪರಂಪರೆಯನ್ನು ಸಾರಿದ ಅವರ ಸಂದೇಶಗಳು ಸರ್ವಕಾಲಕ್ಕೂ ಆದರ್ಶನೀಯ ಎಂದರು.
ಬಿಜೆಪಿ ಮುಖಂಡ ಉಮೇಶ್‌ಕುಮಾರ್ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮತ್ತು ಮೇರು ವ್ಯಕ್ತಿತ್ವ ಸಾಹಿತ್ಯ ಕ್ಷೇತ್ರದ ಅವರ ಕೊಡುಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲು ಕಾರಣವಾಯಿತು. ನುಡಿದಂತೆ ನಡೆದವರು, ನಡೆದು ಇತರರಿಗೂ ಮಾದರಿಯಾದ ಅವರ ಸದ್ಗುಣ ಕನ್ನಡಿಗರು ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಇಒ ವೇಣು, ದಸಂಸ ಮುಖಂಡ ಕುಬೇರ, ಕಸಾಪ ಪದಾಧಿಕಾರಿ ಬಸವರಾಜು, ಬಿಜೆಪಿ ಮುಖಂಡ ರಾಮಕೃಷ್ಣ, ಬಸವರಾಜು, ಕಾಂಗ್ರೆಸ್ ಯುವ ಮುಖಂಡ ವಿಜಯೇಂದ್ರ ಪುಟ್ಟು ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net