ರೈಲ್ವೆ ಮೇಲು ಸೇತುವೆ ಅವಶ್ಯ: ಚಿಕ್ಕಮಂದಗೆರೆ, ಗದ್ದೆಹೊಸೂರು, ಶ್ರವಣನಹಳ್ಳಿ, ಬೇವಿನಹಳ್ಳಿ, ಮೂಡನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಂದ ರೈತರು ಹೇಮಗಿರಿ ಶುಗರ್ಸ್‌ಗೆ ಕಬ್ಬು ಸಾಗಣೆ ಮಾಡಲು ಜತೆಗೆ ಕಿಕ್ಕೇರಿ ಮಾರುಕಟ್ಟೆಗೆ ಎಳನೀರು, ತೆಂಗಿನಕಾಯಿ ಮತ್ತಿತರ ತರಕಾರಿಗಳನ್ನು ಸಾಗಿಸಲು ಮಂದಗೆರೆ ಮಾರ್ಗವಾಗಿಯೇ ಬರಬೇಕಿದೆ. ವಯೋವೃದ್ಧರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಈ ಮಾರ್ಗವಾಗಿಯೇ ತುರ್ತು ಚಿಕಿತ್ಸೆಗೆ ದೂರದ ನಗರ ಪ್ರದೇಶಗಳಿಗೆ ತೆರಳಬೇಕಿದೆ. ನಿತ್ಯ ಹತ್ತಾರು ರೈಲುಗಳು ಓಡಾಡುವುದರಿಂದ ರೈಲು ಬರುವಾಗ ಸಾಕಷ್ಟು ವೇಳೆ ರೈಲ್ವೆ ಗೇಟ್ ಬಳಿ ಕಾಯಬೇಕಿದೆ. ತುರ್ತು, ರೈತರ ಸರಕು ಸಾಗಣೆ, ನಿತ್ಯ ನಾಗರೀಕರ ಓಡಾಟ, ಆರೋಗ್ಯ ಚಿಕಿತ್ಸೆಗಾಗಿ ವೈಜ್ಞಾನಿಕ ರೀತಿಯಲ್ಲಿ ರೈಲ್ವೆ ಮೇಲು ಸೇತುವೆ ತ್ವರಿತವಾಗಿ ಆಗಬೇಕಿದೆ. ಸಮಸ್ಯೆ ಕುರಿತು ರೈಲ್ವೆ ಇಲಾಖೆಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ರೈತರು.