ಪಟ್ಟಣದ ಹಿರೋಡೆ ಬೀದಿಯ ನಿವಾಸಿ ತುಕರಾಂ ಗಾಯಗೊಂಡವರು. ಕಾರ್ಯಕ್ರಮ ನಿಮಿತ್ತ ಪಾಂಡವಪುರ ಪಟ್ಟಣದ ವಿಶ್ವೇಶ್ವರಯ್ಯ ನಾಲೆ ಏರಿ ಮೂಲಕ ಬೈಕ್‌ನಲ್ಲಿ ಪಟ್ಟಣಕ್ಕೆ ಆಗಮಿಸುವ ವೇಳೆ ಬಿಎಸ್ ಎಲ್ ಎನ್ ಕಚೇರಿ ವೃತ್ತದಲ್ಲಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದಿದ್ದಾರೆ. ಘಟನೆಯಿಂದ ಅವರ ಎಡಗೈ ಬೆರಳು ಮುರಿದಿದ್ದು, ಮುಖ ಹಾಗೂ ಎಡಗೈ ತೋಳಿಗೆ ತೀವ್ರವಾಗಿ ಗಾಯವಾಗಿದೆ.