ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ

ಪಾಂಡವಪುರದ ಮನ್‌ಮುಲ್ ಉಪವ್ಯವಸ್ಥಾಪಕರ ಕಚೇರಿಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚೆಕ್ ವಿತರಿಸಿದರು.
ಪಾಂಡವಪುರದ ಮನ್‌ಮುಲ್ ಉಪವ್ಯವಸ್ಥಾಪಕರ ಕಚೇರಿಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚೆಕ್ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್
  • ರಾಸು ವಿಮೆ, ರೈತ ಕಲ್ಯಾಣ ಟ್ರಸ್ಟ್, ಕಟ್ಟಡ ನಿಧಿ ಹಾಗೂ ಹಾಲು ಕರೆಯುವ ಯಂತ್ರದ ಸಬ್ಸಿಡಿ ಹಣದ ಅಂದಾಜು 19.03 ಲಕ್ಷ ರೂ. ಮೊತ್ತದ ಚೆಕ್
ಪಾಂಡವಪುರ: ಮನ್‌ಮುಲ್ ಒಕ್ಕೂಟದ ಆಡಳಿತ ಮಂಡಳಿ ಹಾಗೂ ವಾರ್ಷಿಕ ಸಭೆಯಲ್ಲಿ ಚರ್ಚಿಸಿದ ಬಳಿಕ ರಾಸು ವಿಮೆ ಯೋಜನೆಯ ಮೊತ್ತವನ್ನು 60,000 ರಿಂದ 85,000 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.
ಪಟ್ಟಣದ ಮನ್‌ಮುಲ್ ಉಪವ್ಯವಸ್ಥಾಪಕ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಸು ವಿಮೆ, ರೈತ ಕಲ್ಯಾಣ ಟ್ರಸ್ಟ್, ಕಟ್ಟಡ ನಿಧಿ ಹಾಗೂ ಹಾಲು ಕರೆಯುವ ಯಂತ್ರದ ಸಬ್ಸಿಡಿ ಹಣದ ಅಂದಾಜು 19.03 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ರೈತರು ರಾಸುಗಳಿಗೆ ಕಡ್ಡಾಯವಾಗಿ ರಾಸುವಿಮೆ ಮಾಡಿಸಬೇಕು. ಅಕಾಲಿಕ ಮರಣಕ್ಕೆ ತುತ್ತಾಗುವ ರಾಸುಗಳಿಗೆ ವಿಮೆ ಮಾಡಿಸಿದ್ದರೆ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಇಲ್ಲವಾದರೆ ಪರಿಹಾರ ದೊರೆಯುವುದಿಲ್ಲ. ಏಪ್ರಿಲ್ ತಿಂಗಳ ನಂತರ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಎಚ್‌ಎಫ್ ಹಾಗೂ ಜರ್ಸಿ ಹಸುಗಳು ಶೀತ ಪ್ರದೇಶದಲ್ಲಿ ಬೆಳೆಯುವುದರಿಂದ ಬೇಸಿಗೆಯಲ್ಲಿ ಹಸುಗಳನ್ನು ಮಕ್ಕಳಂತೆ ಪಾಲನೆ ಮಾಡಬೇಕು. ಫ್ಯಾಟ್ ಮೇಲೆ ಹಾಲಿನ ದರ ನಿಗದಿಗಯಾಗುವುದರಿಂದ ರೈತರು ಕಡ್ಡಾಯವಾಗಿ ಗುಣಮಟ್ಟ ಹಾಲು ಪೂರೈಕೆ ಮಾಡಬೇಕು. ಇದೀಗ ತಾಲೂಕಿಗೆ 600 ಮ್ಯಾಟ್ ಬಂದಿದ್ದು ಮುಂದಿನ ದಿನಗಳಲ್ಲಿ ಹಾಲು ಕರೆಯುವ ಹಾಗೂ ಮೇವು ಕತ್ತರಿಸುವ ಯಂತ್ರವನ್ನು ಪೂರೈಕೆ ಮಾಡಲಾಗುವುದು ಎಂದರು.
ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಬೇಸಿಗೆ ಕ್ರಮಿಸುತ್ತಿರುವುದರಿಂದ ರೈತರು ಹೆಚ್ಚಿನ ಆಸಕ್ತಿಯಿಂದ ಹಸುಗಳನ್ನು ಸಾಕಬೇಕು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ರಾಸುಗಳನ್ನು ನೆರಳಿನಲ್ಲಿ ನಿರ್ವಹಣೆ ಮಾಡಬೇಕು. ಹಸಿರು ಮೇವು, ರಸಮೇವು ನಿರ್ವಹಣೆ ಕಡೆಗೆ ಹೆಚ್ಚಿನ ಗಮನಹರಿಸುವುದರ ಜತೆಗೆ ವೈಜ್ಞಾನಿಕವಾಗಿ ರಾಸುಗಳ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.
ರಾಸು ವಿಮೆ ಯೋಜನೆಯಲ್ಲಿ 15.55 ಲಕ್ಷ ರೂ., ಕಟ್ಟಡ ಅನುದಾನ 1.35 ಲಕ್ಷ ರೂ. ಹಾಗೂ ಹಾಲು ಕರೆಯುವ ಯಂತ್ರದ 2.85 ಲಕ್ಷ ರೂ.ಮೌಲ್ಯದ ಚೆಕ್ಕನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ಉಷಾ, ಪ್ರಜ್ವಲ್‌ಗೌಡ, ಹಾಲು ಮಾರಾಟ ಅಧಿಕಾರಿ ಶಶಿಕಲಾ, ಟೆಕ್ನಿಷಿಯನ್ ಆನಂದ್ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net