203 ಗರ್ಭಿಣಿಯರಿಗೆ ಬಾಗಿನ ಸಮರ್ಪಣೆ

ಗಣೇಶೋತ್ಸವ-2026 ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 203 ಗರ್ಭಿಣಿಯರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕಿ ವಿನುತಾ ಉದಯ್ ಹಾಗೂ ಶಾಸಕ ಕೆ.ಎಂ.ಉದಯ್ ಬಾಗಿನ ಅರ್ಪಿಸಿದರು. ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಶಿವು, ಮಹೇಶ್, ವಿಜಯ್‌ಕುಮಾರ್ ಇದ್ದರು.
ಗಣೇಶೋತ್ಸವ-2026 ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 203 ಗರ್ಭಿಣಿಯರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕಿ ವಿನುತಾ ಉದಯ್ ಹಾಗೂ ಶಾಸಕ ಕೆ.ಎಂ.ಉದಯ್ ಬಾಗಿನ ಅರ್ಪಿಸಿದರು. ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಶಿವು, ಮಹೇಶ್, ವಿಜಯ್‌ಕುಮಾರ್ ಇದ್ದರು.
Published on
ಮದ್ದೂರು: ಗಣೇಶೋತ್ಸವ-2026 ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ನಿರಂತರ ಒಂದು ವಾರ ಕಾರ್ಯಕ್ರಮದ ಅಂಗವಾಗಿ ಬುಧವಾರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ 203 ಮಂದಿ ಗರ್ಭಿಣಿಯರಿಗೆ ಬಾಗಿನ ಅರ್ಪಿಸಿ ಶುಭಕೋರಲಾಯಿತು.
ಶಾಸಕ ಕೆ.ಎಂ.ಉದಯ್, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತಾ ಉದಯ್ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಆರಂಭಗೊಂಡ ಗೌರಿ-ವಿನಾಯಕಮೂರ್ತಿ ವಿಶೇಷ ಪೂಜೆ ಬಳಿಕ ತೀರ್ಥಪ್ರಸಾದ ವಿತರಿಸಲಾಯಿತು.
ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗರ್ಭಿಣಿಯರಿಗೆ ಅಲಂಕೃತ ವೇದಿಕೆಯಡಿ ತೀರ್ಥಪ್ರಸಾದ ಜತೆಗೆ ಪುಷ್ಪ, ಅರಿಶಿಣ-ಕುಂಕುಮದೊಟ್ಟಿಗೆ ಫಲ ತಾಂಬೂಲ ಬಾಗಿನ ಅರ್ಪಿಸಲಾಯಿತು.
ವಿನುತಾ ಉದಯ್ ಮಾತನಾಡಿ, ತಾಲೂಕಿನ ಮಹಿಳೆಯರು ಮತ್ತು ಮಕ್ಕಳ ಹಿತದೃಷ್ಟಿಯಿಂದ ಉದಯ್ ಚಾರಿಟಬಲ್ ಟ್ರಸ್ಟ್ ಹಿಂದಿನಿಂದಲೂ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳು ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಲಭ್ಯಗಳನ್ನು ಪ್ರತಿ ವರ್ಷ ನೀಡುತ್ತಾ ಬರುತ್ತಿದೆ ಎಂದರು.
ಟ್ರಸ್ಟ್‌ನ ನಿರ್ದೇಶಕರಾದ ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ಶಿವು, ಮುಖಂಡರಾದ ಮಹೇಶ್, ವಿಜಯಕುಮಾರ್, ಮಮತಾ ಶಂಕರೇಗೌಡ, ನಗರಸಭೆ ಮಾಜಿ ಸದಸ್ಯೆ ಬಿ.ಸಿ.ಸರ್ವಮಂಗಳಾ, ಗ್ರಾಪಂ ಮಾಜಿ ಅಧ್ಯಕ್ಷೆ ಶಿಲ್ಪಾ, ಮಾರಸಿಂಗನಹಳ್ಳಿ ರಾಮಚಂದ್ರು, ಯತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net