ದುಶ್ಚಟದಿಂದ ದೂರವಿದ್ದು ಹೊಸ ಜೀವನ ನಡೆಸಿ

ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗುರುವಾರ ಜರುಗಿದ ಮಧ್ಯವರ್ಜನೆ ಶಿಬಿರದಲ್ಲಿ ಸ್ವತಂತ್ರಚನ್ನವೀರಸ್ವಾಮೀಜಿ  ಮಾತನಾಡಿದರು. ಆರ್‌ಟಿಒ ಮಲ್ಲಿಕಾರ್ಜುನ, ಸುರೇಶ್, ಯೋಗೇಶ್, ಮಂಜು, ಪ್ರಸಾದ್, ನಳಿನಿ ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗುರುವಾರ ಜರುಗಿದ ಮಧ್ಯವರ್ಜನೆ ಶಿಬಿರದಲ್ಲಿ ಸ್ವತಂತ್ರಚನ್ನವೀರಸ್ವಾಮೀಜಿ ಮಾತನಾಡಿದರು. ಆರ್‌ಟಿಒ ಮಲ್ಲಿಕಾರ್ಜುನ, ಸುರೇಶ್, ಯೋಗೇಶ್, ಮಂಜು, ಪ್ರಸಾದ್, ನಳಿನಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಸಲಹೆ
  • 2015ನೇ ಮದ್ಯವರ್ಜನ ಶಿಬಿರ
ಕಿಕ್ಕೇರಿ: ಸಮಾಜದ ಹಾಗೂ ತಮ್ಮ ಆರೋಗ್ಯಕ್ಕಾಗಿ ದುಶ್ಚಟದಿಂದ ದೂರವಿದ್ದು ನವಜೀವನ ಸಾಗಿಸಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜ್ಞಾನ ವಿಕಾಸ ಕೇಂದ್ರ ಮತ್ತಿತರ ಸಂಸ್ಥೆ ಸಹಕಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2015ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
ಕುಡಿತ ಬಿಟ್ಟಿರುವುದನ್ನು ಕಂಡು ಇವರ ಕುಟುಂಬದಲ್ಲಿ ಮೂಡಿದ ಆನಂದ ಸದಾ ಹೀಗೆ ಇರಲಿ. ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಸಾಧನೆ ಸಾರ್ಥಕತೆ ತಂದಿದೆ. ಕುಡಿತ ದೇಹ ಸುಡದೆ ಇಡೀ ಕುಟುಂಬ, ಸಮಾಜವನ್ನು ಸುಡಲಿದೆ. ದುಡ್ಡು ಕೊಟ್ಟು ಮಾರ್ಯದೆ, ಆರೋಗ್ಯ ಕಳೆದುಕೊಂಡು ಸರ್ವನಾಶವಾಗಿಸುವ ಈ ಚಟದಿಂದ ಮುಕ್ತರಾಗಿಸಲು ಧರ್ಮಸ್ಥಳ ಯೋಜನೆ ಹಮ್ಮಿಕೊಂಡಿರುವ ಯೋಜನೆ ವಿಶ್ವವೇ ಮೆಚ್ಚುವಂತಿದೆ ಎಂದರು.
ಕಾಪನಹಳ್ಳಿ ಗವಿಮಠ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಸ್ವಾಮೀಜಿ ಮಾತನಾಡಿ, ಮದ್ಯಪಾನ ಆರಂಭದಲ್ಲಿ ಶೋಕಿಗಾಗಿ ಆಹ್ವಾನಿಸಿ ತದನಂತರ ದೇಹ, ಮನಸ್ಸು, ಆರೋಗ್ಯ, ಕುಟುಂಬ ಎಲ್ಲವನ್ನು ಹಾಳು ಮಾಡಲಿದೆ. ಮದ್ಯದ ಅಮಲು ಅನೈತಿಕ, ಸಮಾಜಘಾತುಕ ಚಟುವಟಿಕೆಗೆ ಪ್ರೇರೇಪಿಸಲಿದೆ. ದೇಶದ ಬಹುದೊಡ್ಡ ಪಿಡುಗಾದ ಬಡತನ, ಅನಕ್ಷರತೆಗಿಂತಲೂ ದೊಡ್ಡ ಪಿಡುಗು ಇದಾಗಿದೆ. ಅಕಾಲಿಕ ಮೃತ್ಯುವಿನಿಂದ ಅನೇಕ ಕುಟುಂಬ ಬೀದಿಗೆ ಬಿದ್ದಿವೆ. ಮಕ್ಕಳ ಭವಿಷ್ಯ ಹಾಳಾಗಿದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಹೊಸದಾಗಿ ಶಾಲೆಗಳು ಆರಂಭವಾಗುವ ಬದಲು ಹೆಚ್ಚು ಎಣ್ಣೆ ಅಂಗಡಿ ಆರಂಭವಾಗುತ್ತಿರುವುದು ಬೇಸರದ ಸಂಗತಿ. ಮದ್ಯಪಾನ ಬ್ರಿಟಿಷರು ತಂದಿರುವ ಸಂಸ್ಕೃತಿ. ನಮ್ಮ ದೇಶವನ್ನೇ ಸುಡುತ್ತಿರುವ ಕೆಟ್ಟ ಸಂಸ್ಕೃತಿಯಿಂದ ದೂರವಾಗಲು ಕುಡಿತ ಬಿಡಿ ನೆಮ್ಮದಿ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು.
ಯೋಜನೆ ಜಿಲ್ಲಾ ನಿರ್ದೇಶಕ ಎ.ಯೋಗೇಶ್ ಮಾತನಾಡಿ, ಶಿಬಿರ 1982ರಲ್ಲಿ ಆರಂಭವಾಗಿದ್ದು, ಸುಮಾರು 1.5ಲಕ್ಷ ಮಂದಿ ಮದ್ಯವರ್ಜಿಸಿ ಪಾನಮುಕ್ತರಾಗಿ ನವಜೀವನ ಸಾಗಿಸುತ್ತಿದ್ದಾರೆ. ಕುಡಿತ ಕುಟುಂಬದ ಸಮಸ್ಯೆ ಆಗದೆ ಇಡೀ ಸಮಾಜದ ಪಿಡುಗಾಗಿದೆ. ಸಜ್ಜನ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮದ್ಯಪಾನದಂತಹ ದುಶ್ಚಟದಿಂದ ದೂರವಾಗಿ ಎಂದು ಮನವಿ ಮಾಡಿದರು.
ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್ ಮಾತನಾಡಿ, ಮದ್ಯವರ್ಜಿಸಿ ನವಜೀವನಕ್ಕೆ ಮುಂದಾಗುವ ಸದಸ್ಯರಿಗೆ ಸ್ವಾವಲಂಬಿಯಾಗಿ ಬದುಕಲು ಸಂಸ್ಥೆಯ ಮಾರ್ಗದರ್ಶನ, ನೆರವು ಇದ್ದು ಸದ್ಭಳಕೆ ಮಾಡಿಕೊಳ್ಳಿ ಎಂದು ವಿನಂತಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಶಿಬಿರದಲ್ಲಿ 36 ಜನರು ಮದ್ಯವ್ಯಸನಿಗಳು ಭಾಗವಹಿಸಿ ಕುಡಿತ ಬಿಟ್ಟು ನವಜೀವನ ಸಾಗಿಸುವುದಾಗಿ ಪ್ರತಿಜ್ಞೆ ಮಾಡಿದರು. ಪೂಜ್ಯ ವೀರೇಂದ್ರ ಹೆಗ್ಗಡೆ ತಮ್ಮ ಬದುಕಿಗೆ ದೇವರಾಗಿದ್ದಾರೆ ಎಂದು ನುಡಿದ ಕ್ಷಣವನ್ನು ಕಂಡು ಇವರ ಕುಟುಂಬದವರಲ್ಲಿ ಆನಂದಭಾಷ್ಪ ಮೂಡಿತು.
ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ರಾಜೇಶ್, ಉಪಾಧ್ಯಕ್ಷೆ ನಳಿನಿ, ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಸುನೀತಾ, ಸದಸ್ಯರಾದ ಮೊಟ್ಟೆ ಮಂಜು, ನಾರಾಯಣಸ್ವಾಮಿ, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಧುಸೂದನ್, ಶಿವರಾಮು, ಮಣಿ, ಮೇಲ್ವಿಚಾರಿಕೆ ಯಶೋದಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net