ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲಿ

ಕ್ಯಾತಘಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಟ್ಟಡವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು. ಎಸ್.ರಾಜೀವ್,  ಹರೀಶ್ ಬಾಬು,  ಸಂದರ್ಶ, ಗಿರೀಶ್ ಕ್ಯಾತಘಟ್ಟ ಇತರರಿದ್ದರು.
ಕ್ಯಾತಘಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಟ್ಟಡವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು. ಎಸ್.ರಾಜೀವ್, ಹರೀಶ್ ಬಾಬು, ಸಂದರ್ಶ, ಗಿರೀಶ್ ಕ್ಯಾತಘಟ್ಟ ಇತರರಿದ್ದರು.
Published on
ಕೆ.ಎಂ.ದೊಡ್ಡಿ :ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿ ಸಮಾಜದ ಏಳಿಗೆಗೂ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಕದಲೂರು ಉದಯ್ ಶ್ಲಾಘಿಸಿದರು.
ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಇತ್ತೀಚೆಗೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ. ಅದೇ ರೀತಿ ಸ್ವ ಸಹಾಯ ಸಂಘಗಳ ಮೂಲಕ ಅರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲು ಹೊರಟ್ಟಿದ್ದೇನೆ. ನಾನು ಯಾವುದನ್ನು ನನ್ನ ವೈಯುಕ್ತಿಕ ಉಪಯೋಗಕ್ಕಾಗಲಿ ಮಾಡುತ್ತಿಲ್ಲ. ಏನೇ ಅಡೆ ತಡೆ ಬಂದರೂ ಅಂಜುವ ಅಥವಾ ಹೆದರುವ ಜಾಯಮಾನ ನನ್ನದಲ್ಲ ಎಂದರು.
ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮುದ್ರಣ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಗಿರೀಶ್ ಕ್ಯಾತಘಟ್ಟ, ಗ್ರಾಪಂ ಅಧ್ಯಕ್ಷ ಶಿವನಂಜಪ್ಪ, ಸದಸ್ಯರಾದ ಸುಂದ್ರಮ್ಮ, ಜೀವಿತ, ವೆಂಕಟಲಕ್ಷ್ಮೀ ಸಿದ್ದರಾಜು, ರಾಜೇಶ್, ಪ್ರಕಾಶ್, ಪಿಡಿಒ ನಾಗೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net