ಕನ್ನಡಿಗರು ಮಾತೃಭಾಷೆ ಬಳಸಿ ಬೆಳೆಸಲಿ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಡ್ಯ ರಕ್ಷಣಾ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಅವುಗಳಿಗೆ ಸೇರಿದ ವಾಹನಗಳಲ್ಲಿ ಕನ್ನಡ ಕಡ್ಡಾಯ ಬಳಸಲು ನಡೆಸಿದ ಆಂದೋಲನಕ್ಕೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಧರ್ ಚಾಲನೆ ನೀಡಿದರು. ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು, ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಮುಖಂಡ ಜೈಶ್ರೀರಾಮ್ ರವಿ, ಚಿಕ್ಕ, ಛಾಯಾದೇವಿ ಇತರರು ಇದ್ದರು.

Published on
ಶ್ರೀರಂಗಪಟ್ಟಣ: ಮಾತೃಭಾಷೆ ಕನ್ನಡ ನಮ್ಮ ಅಸ್ಮಿತೆಯಾಗಿದ್ದು, ಕನ್ನಡಿಗರು ಹೆಮ್ಮೆಯಿಂದ ಅದನ್ನು ಬಳಸಿ, ಬೆಳೆಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಧರ್ ತಿಳಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಮಂಡ್ಯ ರಕ್ಷಣಾ ವೇದಿಕೆಯಿಂದ ಪಟ್ಟಣ ಸೇರಿದಂತೆ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾತೃಭಾಷೆ ಆದ್ಯತೆ ಮತ್ತು ಉಳಿವು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜ್ಞಾನ ಮತ್ತು ಪ್ರಜ್ಞೆಗೆ ನಮ್ಮ ತಾಯಿ ಭಾಷೆಯೇ ಆದ್ಯತೆಯಾಗಿದ್ದು, ಪ್ರಪಂಚದ ವೈವಿಧ್ಯ ಜನರೊಂದಿಗೆ ಸಂಹವನಕ್ಕೆ ಆಂಗ್ಲ ಭಾಷೆ ಅಗತ್ಯವಿದೆ. ಆದರೆ ನಮ್ಮತನ ಮತ್ತು ಮಾತೃ ಭಾಷೆಯಿಂದ ಯಾರೂ ದೂರವಾಗಬಾರದು ಎಂದರು.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆಗಳು ಮತ್ತು ಅವುಗಳಿಗೆ ಸೇರಿದ ಬಸ್‌ಗಳಲ್ಲಿ ಕನ್ನಡ ಬಳಕೆಯೇ ಮಾಯಾವಾಗುತ್ತಿದೆ. ಅಲ್ಲದೆ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ಅತಿಯಾದ ಇಂಗ್ಲಿಷ್ ಹೇರಿಕೆಯಿಂದ ಇತ್ತೀಚಿನ ಪೀಳಿಗೆಯ ಮಕ್ಕಳಲ್ಲಿ ಕನ್ನಡ ಭಾಷೆ, ಲಿಪಿ ಹಾಗೂ ಪದಗಳ ಅರ್ಥವೇ ತಿಳಿಯದಂತಾಗಿ ತಪ್ಪು ವಾಕ್ಯ ರಚನೆ ಮತ್ತು ಮಾತನಾಡುತ್ತಿರುವುದು ವಿಪರ್ಯಾಸ ಸಂಗತಿ. ಈಗ ಮೊದಲ ಹಂತವಾಗಿ ಪಟ್ಟಣದಲ್ಲಿ ಈ ಆಂದೋಲನ ಹಮ್ಮಿಕೊಂಡಿದ್ದು, ನಂತರದ ದಿನಗಳಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯಾದ್ಯಂತವು ಸಹ ಈ ಆಂದೋಲನವನ್ನು ಸಂಘಟನೆಯೊಂದಿಗೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವ ಕೆಲಸವನ್ನು ವೇದಿಕೆ ಮಾಡಲಿದೆ. ವೈದ್ಯರಾದ ಡಾ.ಶ್ರೀಧರ್ ಆಸ್ಪತ್ರೆಗೆ ಆಗಮಿಸುವ ರೋಗಿಗಳೊಂದಿಗೆ ಅತ್ಯಂತ ಸರಳತೆ ಮತ್ತು ಪ್ರೀತಿ, ಕಾಳಜಿಯಿಂದ, ವಿನಯತೆಯಿಂದ ಸ್ಪಂದಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಮುಖಂಡರಾದ ಜೈಶ್ರೀರಾಮ್ ರವಿ, ಅಲ್ಲಾಪಟ್ಟಣ ಚಿಕ್ಕ, ವಿ.ಮೋಹನ್, ಛಾಯಾದೇವಿ, ಸಣ್ಣಮ್ಮ, ಭಾಗ್ಯಲಕ್ಷ್ಮೀ, ಸವಿತಾ, ಸೌಭಾಗ್ಯಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net