ಬಲಮರಿಯಲ್ಲಿ ಮುಳುಗಿ ಪ್ರವಾಸಿ ಸಾವು

 ಬಲಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವನಪ್ಪಿದ ಜಾಮ್ ಲಿಯನ್ ತಾಂಗ್
ಬಲಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವನಪ್ಪಿದ ಜಾಮ್ ಲಿಯನ್ ತಾಂಗ್
Published on
ಕೆ.ಆರ್.ಸಾಗರ : ಬೆಳಗೊಳ ಗ್ರಾಮದ ಬಳಿ ಇರುವ ಕಾವೇರಿ ಬಲಮುರಿ ತಾಣದಲ್ಲಿ ಈಜಲು ಹೋಗಿದ್ದ ಮಿಜೋರಾಂ ಮೂಲದ ಯುವಕ ಶುಕ್ರವಾರ ಮುಳುಗಿ ಮೃತನಾಗಿದ್ದಾನೆ.
ಬೆಂಗಳೂರು ಕೊತ್ತನೂರಿನ ಕೈಲಾಸನಹಳ್ಳಿಯ ಕಾಲ್ವಿನ್ ಥಿಯೊಲಾಜಿಕಲ್ ಕಾಲೇಜ್‌ನಲ್ಲಿ ಬೈಬಲ್ ಅಧ್ಯಯನ ಮಾಡಲು ಬಂದಿದ್ದ ಮಿಜೋರಾಂನ ಚಂಪೈನ್ ಜಿಲ್ಲೆ ಜಿಯೋವಿಂಗ್ ಗ್ರಾಮದ
ಜಾಮ್ ಲಿಯನ್ ತಾಂಗ್ (28) ಮೃತ. ಈತ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಪ್ರವಾಸದ ನಿಮಿತ್ತ ಸ್ನೇಹಿತರು ಮತ್ತು ಬೋಧಕರೊಂದಿಗೆ ಬಲಮುರಿಗೆ ಬಂದಿದ್ದ. ದೋಣಿ ವಿಹಾರ ಕೇಂದ್ರದ ಬಳಿ ಕಾವೇರಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜುತ್ತಿದ್ದಾಗ ಮುಳಗಿದ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net