ಕೋಟೆ ಗಣಪತಿ, ಆಂಜನೇಯ ಗುಡಿಗೆ ಹೊಂದಿಕೊಂಡಿರುವ ಮಾರಮ್ಮ ಗುಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಿಗೆ ಎಣ್ಣೆ ಮಜ್ಜನ, ಎಳನೀರು ಅಭಿಷೇಕ ನೆರವೇರಿಸಿ, ಬೇವಿನ ಸೊಪ್ಪಿನಿಂದ ತಂಪು ಮಾಡಿದರು. ಬೆಳಗ್ಗಿನಿಂದಲೂ ಮಹಿಳೆಯರು, ಮಕ್ಕಳು ಗುಡಿಗೆ ಆಗಮಿಸಿ ಸಾಲು ನಿಂತು ದೇವಿಯ ತಲೆ ಮೇಲೆ ಗಂಗಾಜಲ ಸುರಿಯುವ ಮೂಲಕ ತಂಪು ಮಾಡಿದರು. ಎಣ್ಣೆ ಮಜ್ಜನ, ಅರಿಶಿಣ ಹಾಕುತ್ತ, ಬೇವಿನ ಸೊಪ್ಪನ್ನು ಮುಡಿಗೆ ಅರ್ಪಿಸಿದರು.