ಕೊಕ್ಕರೆ ಬೆಳ್ಳೂರು ಅಂಚೆ ಲಕೋಟೆ

 ಅಂಚೆ ಇಲಾಖೆ ವತಿಯಿಂದ ವಿಶೇಷ ಇತಿಹಾಸ ಸಾರುವ ಕೊಕ್ಕರೆ ಬೆಳ್ಳೂರು ಅಂಚೆ ಲಕೋಟೆಯನ್ನು ಶಾಸಕ ಕೆ.ಎಂ.ಉದಯ ಲೋಕಾರ್ಪಣೆಗೊಳಿಸಿದರು. ಕೆಂಪರಾಜು, ಎಂ.ಡಿ.ಆಕಾಶ್, ಪಿ.ಸಂದರ್ಶ, ಹರೀಶ್‌ಬಾಬು, ರಾಜು, ಕಾಳೇಶ್ವರ ಇದ್ದರು.
ಅಂಚೆ ಇಲಾಖೆ ವತಿಯಿಂದ ವಿಶೇಷ ಇತಿಹಾಸ ಸಾರುವ ಕೊಕ್ಕರೆ ಬೆಳ್ಳೂರು ಅಂಚೆ ಲಕೋಟೆಯನ್ನು ಶಾಸಕ ಕೆ.ಎಂ.ಉದಯ ಲೋಕಾರ್ಪಣೆಗೊಳಿಸಿದರು. ಕೆಂಪರಾಜು, ಎಂ.ಡಿ.ಆಕಾಶ್, ಪಿ.ಸಂದರ್ಶ, ಹರೀಶ್‌ಬಾಬು, ರಾಜು, ಕಾಳೇಶ್ವರ ಇದ್ದರು.
Published on

ಶಾಸಕ ಕೆ.ಎಂ.ಉದಯ್ ಪ್ರಶಂಸೆ

ಮದ್ದೂರು: ಅಂಚೆ ಇಲಾಖೆ ವತಿಯಿಂದ ವಿಶ್ವ ಪ್ರಖ್ಯಾತ ಕೊಕ್ಕರೆ ಬೆಳ್ಳೂರು ಅಂಚೆ ಲಕೋಟೆಯನ್ನು ಹೊರ ತಂದಿರುವುದು ಪ್ರಶಂಸನೀಯ ಸಂಗತಿ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಬುಧವಾರ ಅಂಚೆ ಇಲಾಖೆ ವತಿಯಿಂದ ಹೊರ ತಂದಿರುವ ಕೊಕ್ಕರೆ ಬೆಳ್ಳೂರು ಇತಿಹಾಸ ಸಾರುವ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಕೊಕ್ಕರೆ ಬೆಳ್ಳೂರು ಹೆಸರಿನ ಅಂಚೆ ಲಕೋಟೆ ವಿಶೇಷವಾಗಿದ್ದು ಇದು ಇಡೀ ದೇಶದಲ್ಲೇ ಉದ್ಘಾಟನೆಯಾಗಿ ಲಕೋಟೆ ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ಹಾಗೂ ಪರಂಪರೆಯನ್ನು ಗೌರವಿಸಲು ಅಂಚೆ ಇಲಾಖೆಯು ಆಯಾ ವಿಷಯದ ಮಹತ್ವನ್ನು ದಾಖಲಿಸುವ ಉದ್ದೇಶದಿಂದ ಬಿಡುಗಡೆ ಮಾಡಿದ್ದು, ಕೊಕ್ಕರೆ ಬೆಳ್ಳೂರು ಗ್ರಾಮದ ಇತಿಹಾಸವು ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪಸರಿಸುವುದಾಗಿ ಹೇಳಿದರು.
ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ವಿವಿಧ ದೇಶಗಳಿಂದ ಪಕ್ಷಿಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಲು ಬರುತ್ತವೆ. ಗ್ರಾಮಸ್ಥರಿಗೆ ಹಾಗೂ ವಲಸೆ ಬರುವ ಪಕ್ಷಿಗಳಿಗೂ ಅವಿನಾಭಾವ ಸಂಬಂಧವಿದೆ. ಮುಂದಿನ ದಿನಗಳಲ್ಲಿ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಈ ವೇಳೆ ಅಂಚೆ ಇಲಾಖೆ ಅಧೀಕ್ಷಕ ಎಂ.ಡಿ.ಆಕಾಶ್ ಮಾತನಾಡಿ, ಇದು ಸಾಮಾನ್ಯ ಅಂಚೆ ಲಕೋಟೆಗಳಿಗಿಂತ ಭಿನ್ನವಾಗಿದ್ದು ಸಂಗ್ರಹಕಾರರಿಗೆ ಹೆಚ್ಚಿನ ಮೌಲ್ಯವನ್ನು ಹೊಂದಿರುವುದಾಗಿ ಹಾಗೂ ಅಂಚೆ ಲಕೋಟೆ ಬಿಡುಗಡೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಿರುವುದಾಗಿ ತಿಳಿಸಿದರು.
ಇದೇ ವೇಳೆ ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ಕಟ್ಟಡ ನವೀಕರಣ ಹಾಗೂ ಕೂಸಿನ ಮನೆ ಉದ್ಘಾಟನೆಗೊಳಿಸಿದ ಶಾಸಕ ಕೆ.ಎಂ.ಉದಯ್ ಅವರು ಕೆ.ಬೆಳ್ಳೂರು ಗ್ರಾಪಂಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮವಾಗಿ ಕರ್ತವ್ಯನಿರ್ವಹಿಸುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಮೆಚ್ಚುಗೆಯ ವಿಷಯ ಎಂದರು.
ಗ್ರಾಪಂ ಅಧ್ಯಕ್ಷ ಕೆಂಪರಾಜು, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಅಂಚೆ ಇಲಾಖೆಯ ಸಹಾಯಕರಾದ ರಾಜು ಕಾಳೇಶ್ವರ, ಟಿ.ಎಲ್.ನಾಗೇಶ್, ಕೆಂಪರಾಜು, ಚೈತ್ರ ಶಶಿಧರ್, ಗ್ರಾ.ಪಂ.ಸದಸ್ಯರಾದ ಸುಂದ್ರಮ್ಮ, ಮಾದೇಶ್ ಭಾಗ್ಯಮ್ಮ, ಶಶಿರೇಖಾ, ಜಯಮ್ಮ, ಗೀತಾಪ್ರಸನ್ನ, ಸಿದ್ಧಪ್ಪ, ದಿವ್ಯರಾಮಶೆಟ್ಟಿ,
ಮುಖಂಡರಾದ ಜೆ.ಸುರೇಶ್, ಶಿವಣ್ಣ, ಗುಜ್ಜೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಅಂಚೆ ಇಲಾಖೆ ವತಿಯಿಂದ ವಿಶೇಷ ಇತಿಹಾಸ ಸಾರುವ ಕೊಕ್ಕರೆ ಬೆಳ್ಳೂರು ಅಂಚೆ ಲಕೋಟೆಯನ್ನು ಶಾಸಕ ಕೆ.ಎಂ.ಉದಯ ಲೋಕಾರ್ಪಣೆಗೊಳಿಸಿದರು. ಕೆಂಪರಾಜು, ಎಂ.ಡಿ.ಆಕಾಶ್, ಪಿ.ಸಂದರ್ಶ, ಹರೀಶ್‌ಬಾಬು, ರಾಜು, ಕಾಳೇಶ್ವರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net