ಹಳ್ಳಿ ಶೈಲಿಯಲ್ಲೇ ಗುಡಿಸಲು ನಿರ್ಮಿಸಿ ಭತ್ತ, ರಾಗಿ ರಾಶಿ ಹಾಕಿ ಸೇರು, ಮೊರ, ಇಬ್ಬಳಿಗೆ, ಕೂಡುಗೋಲು ಸೇರಿದಂತೆ ರೈತರು ಬಳಸುವ ಸಾಮಗ್ರಿಗಳನ್ನು ಪೂಜಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆ ತೊಟ್ಟು ಗಮನ ಸೆಳೆದರು. ಸಂಸ್ಥೆಯ ಅಧ್ಯಕ್ಷ ರವಿ ಸಾವಂದಿಪುರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಪಿ.ಸೌಮ್ಯಾ, ಶಿಕ್ಷಕರಾದ ಎಸ್.ಬಿ. ಅಶ್ವಿನಿ, ಪಿ. ಸವಿತಾ, ಸುಕಾವ್ಯ, ವೈ.ಬಿ.ಕೃತಿಕಾ, ಎಚ್.ಸಿ. ಅರ್ಪಿತಾ, ಅನುಪಮಾ, ಶ್ವೇತಾ, ಆಶಾ ಇದ್ದರು.