ರಥ ಸಪ್ತಮಿ ಸಂಭ್ರಮ

ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿಯ ಕಂಬದ ಲಕ್ಷ್ಮೀ ನರಸಿಂಹಸ್ವಾಮಿಗೆ ರಥಸಪ್ತಮಿ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿಯ ಕಂಬದ ಲಕ್ಷ್ಮೀ ನರಸಿಂಹಸ್ವಾಮಿಗೆ ರಥಸಪ್ತಮಿ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
Published on
ಕಿಕ್ಕೇರಿ: ರಥಸಪ್ತಮಿ ಹಿನ್ನೆಲೆಯಲ್ಲಿ ಹೋಬಳಿಯಾದ್ಯಂತ ವಿವಿಧ ವಿಷ್ಣು ದೇಗುಲಗಳಲ್ಲಿ ಭಾನುವಾರ ಪೂಜಾ ಕೈಂಕರ್ಯ ನೆರವೇರಿತು.
ಹಲವೆಡೆ ಜನರು ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮಂಡಿ, ಪಾದದ ಮೇಲೆ ಇಟ್ಟುಕೊಂಡು ಸೂರ್ಯದೇವನ ಸ್ತುತಿಸುತ್ತಾ ಸ್ನಾನ ಮಾಡಿದರು.
ನರಸಿಂಹಸ್ವಾಮಿ ಸ್ವಾಮಿ ದೇಗುಲ, ಬೋಳಮಾರನಹಳ್ಳಿಯ ಕಂಬದ ಲಕ್ಷ್ಮೀನರಸಿಂಹಸ್ವಾಮಿ, ಗೂಡೇಹೊಸಹಳ್ಳಿ ಶ್ರೀನಿವಾಸ ದೇಗುಲ, ಕೃಷ್ಣಾಪುರದ ಚೆಲುವ ನಾರಾಯಣಸ್ವಾಮಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ದೇವರಿಗೆ ಪರಿಮಳ ಪುಷ್ಪಗಳ ಅಲಂಕಾರ, ವಸ್ತ್ರಾಭರಣ ತೊಡಿಸಿ ಪೂಜಿಸಲಾಯಿತು.
================
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net