ರಾಜ್ಯ ಹೆದ್ದಾರಿಯ ಎಪಿಎಂಸಿ ಮಾರುಕಟ್ಟೆ ಬಳಿ ವಿಪ್ರ ಸಮಾಜದ ರುದ್ರಭೂಮಿ ಇದೆ. ಇದು ಈ ಸಮುದಾಯಕ್ಕೆ ಮೀಸಲಾದ ರುದ್ರಭೂಮಿಯಾಗಿದೆ. ಗ್ರಾಮಸ್ಥರಿಗೆ ಸಮಸ್ಯೆ ಆಗಬಾರದು ಎಂದು ಮಾನವೀಯತೆಯಿಂದ ಅಂತ್ಯಸಂಸ್ಕಾರಕ್ಕೆ ಒಂದಿಷ್ಟು ಜಾಗ ಬಿಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಆಗಿದೆ. ವಿಪ್ರ ಸಮಾಜ ದವರು ತಮ್ಮ ಸಮುದಾಯದವರಿಗೆಂದೇ ಇರಿಸಿಕೊಂಡಿದ್ದ 22 ಗುಂಟೆಯಲ್ಲಿ ಸ್ವಲ್ಪ ಜಾಗಬಿಟ್ಟುಕೊಟ್ಟಿದ್ದಾರೆ. ಗ್ರಾಮದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಖಬರ್‌ಸ್ತಾನ್ ಇದೆ. ಒಕ್ಕಲಿಗ, ಕುರುಹಿನಶೆಟ್ಟಿ, ಕುಂಬಾರ, ಮಡಿವಾಳ, ಮಾರ್ವಾಡಿ, ಕ್ರೈಸ್ತ, ಗಂಗಾಮತಸ್ಥ ಸೇರಿದಂತೆ ವಿವಿಧ ಸಮಾಜದವರೂ ಈ ಊರಿನಲ್ಲಿದ್ದಾರೆ.