ಒತ್ತುವರಿ ತೆರವು ಪರಿಶೀಲನೆ

ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಮದ್ದೂರಮ್ಮ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶಾಸಕ ಕೆ.ಎಂ.ಉದಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಾರಾಜು, ಲಿಖಿತ, ಪುಟ್ಟರಾಮು, ಶಂಕರೆಗೌಡ, ಸುನೀಲ್‌ಕುಮಾರ್ ಇದ್ದರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಮದ್ದೂರಮ್ಮ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶಾಸಕ ಕೆ.ಎಂ.ಉದಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಾರಾಜು, ಲಿಖಿತ, ಪುಟ್ಟರಾಮು, ಶಂಕರೆಗೌಡ, ಸುನೀಲ್‌ಕುಮಾರ್ ಇದ್ದರು.
Published on
ಮದ್ದೂರು: ತಾಲೂಕಿನಾದ್ಯಂತ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಸುಪ್ರೀಂಕೋರ್ಟ್‌ನ ಆದೇಶದಂತೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿರುವುದಾಗಿ ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಮಂಗಳವಾರ ಮದ್ದೂರು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲನೆ ಹಾಗೂ ಸ್ಥಳೀಯ ರೈತರಿಂದ ಮಾಹಿತಿ ಸಂಗ್ರಹಿಸಿ ಮಾತನಾಡಿದರು. ಸುಪ್ರೀಂಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಕಾವೇರಿ ನೀರಾವರಿ ನಿಗಮ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೆರೆ ಸರ್ವೇ ಕಾರ್ಯ ಕೈಗೊಂಡು ಒತ್ತುವರಿ ತೆರವು ಕೈಗೊಂಡು ಅಧಿಕ ನೀರು ಸಂಗ್ರಹಣೆ ಜತೆಗೆ ಕೆರೆ ಉಳಿವಿಗೆ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.
ಕಳೆದ 15 ದಿನಗಳಿಂದಲೂ ಅಧಿಕಾರಿಗಳು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಟ್ರಂಚ್ ನಿರ್ಮಿಸಿ ಗಡಿ ಗುರುತಿಸುತ್ತಿದ್ದಾರೆ. ಕೆಲ ರೈತರು ಕೆರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅವರಿಂದ ಯಾವುದೇ ತಕರಾರು ಇಲ್ಲದೆ ಜಾಗ ವಾಪಸ್ ಮಾಡುತ್ತಿರುವುದಾಗಿ ಹೇಳಿದರು.
ಈಗಾಗಲೇ ತಾಲೂಕಿನಲ್ಲಿ ದೊಡ್ಡಕೆರೆಯಾಗಿರುವ ಸೂಳೆಕೆರೆಯನ್ನು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡು 300 ಎಕರೆಯನ್ನು ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮದ್ದೂರಮ್ಮ ಕೆರೆ ಸರ್ವೇ ಕಾರ್ಯ ಮತ್ತು ತೆರವು ಕಾರ್ಯಾಚರಣೆ ಮುಗಿದ ಬಳಿಕ ಎಷ್ಟು ಎಕರೆ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಹೇಳಿದರು.
ಮದ್ದೂರಮ್ಮ ಕೆರೆಯನ್ನು ಪ್ರವಾಸಿ ತಾಣವಾಗಿಸಬೇಕೆಂಬ ಯೋಜನೆ ಈಗಾಗಲೇ ಸಿದ್ಧಗೊಂಡಿದೆ. ಕೆರೆ ಒತ್ತುವರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಪ್ರವಾಸಿ ತಾಣವನ್ನಾಗಿಸಲು ರೂಪಿಸಲು ಕ್ರಮ ವಹಿಸಲಾಗಿದೆ ಎಂದು ಉದಯ್ ಹೇಳಿದರು.
ಕಳೆದ ಹಲವಾರು ವರ್ಷಗಳಿಂದಲೂ ಸ್ಥಳೀಯ ಗ್ರಾಮದ ರೈತರು ಹಿಡುವಳಿ ಮಾಡಿಕೊಂಡು ಬಂದಿದ್ದು ಕೆರೆ ಜಾಗದಲ್ಲಿ ಜಮೀನನ್ನು ಮಾಡಿಕೊಂಡಿರುವ ರೈತನಿಂದ ಯಾವುದೇ ತಕರಾರು ಇಲ್ಲದಂತಾಗಿದೆ. ಕೆಲ ರೈತರುಗಳ ಬಳಿ ದಾಖಲಾತಿಗಳು ಇದ್ದು ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರ್ವೇ ಕಾರ್ಯ ಕೈಗೊಂಡು ರೈತರಿಗೆ ಯಾವುದೇ ತೊಡಕುಂಟಾಗದಂತೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಒತ್ತುವರಿ ಜಾಗಗಳನ್ನು ಕಂದಾಯ, ನೀರಾವರಿ ಇಲಾಖೆಯ ಸುಪರ್ದಿಗೆ ಪಡೆಯಲು ಅಧಿಕಾರಿಗಳು ಕ್ರಮ ವಹಿಸಿದ್ದು, ಇದರಿಂದಾಗಿ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆಗೊಂಡು ಬೇಸಾಯಕ್ಕೂ ಅನುಕೂಲವಾಗಲಿದೆ. ಕೊಳವೆ ಬಾವಿಗಳಿಗೂ ಜಲ ಹೆಚ್ಚಲಿದೆ ಎಂದು ಹೇಳಿದರು.
ಕಾವೇರಿ ನೀರಾವರಿ ನಿಗಮದ ಎ.ಇ.ಇ. ನಾಗರಾಜು, ಎ.ಡಿ.ಆರ್.ಎಲ್. ಲಿಖಿತಾ, ಮುಖಂಡರಾದ ಪುಟ್ಟರಾಮು, ಶಂಕರೇಗೌಡ, ಸುನೀಲ್‌ಕುಮಾರ್, ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಉಮೇಶ್, ಕಿಟ್ಟಿ, ವೆಂಕಟೇಶ್, ಕೃಷ್ಣಪ್ಪ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net