ಗಮನಸೆಳೆದ ಹವ್ಯಾಸಿ ಗಾಯಕರ ಗಾಯನ: ನಗರದ ಹೊರವಲಯದ ತೋಟದಲ್ಲಿ ಕಾರ್ಯಕ್ರಮ

ಮಂಡ್ಯದಲ್ಲಿ ಸಿಂಗರ್ಸ್ ಗ್ರೂಪ್ ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಸಹಯೋಗದಲ್ಲಿ ಕರೋಕೆ ಹಾಡುಗಾರಿಕೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಸಿಂಗರ್ಸ್ ಗ್ರೂಪ್ ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಸಹಯೋಗದಲ್ಲಿ ಕರೋಕೆ ಹಾಡುಗಾರಿಕೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಸಿಂಗರ್ಸ್ ಗ್ರೂಪ್ ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ನಿಂದ ಆಯೋಜನೆ
  • ಗಾಯನದಲ್ಲಿ ಆಸಕ್ತಿ ಇರುವಂತಹವರಿಗೆ ಸಮರ್ಪಕ ವೇದಿಕೆ
ಮಂಡ್ಯ: ನಗರದ ಹೊರವಲಯದ ವಕೀಲ ಸಿದ್ದಯ್ಯ ಅವರ ತೋಟದಲ್ಲಿ ಆಯೋಜಿಸಿದ್ದ ಹವ್ಯಾಸಿ ಗಾಯಕರ ಗಾಯನ ಕಾರ್ಯಕ್ರಮ ಗಮನಸೆಳೆಯಿತು.
ಮಂಡ್ಯ ಸಿಂಗರ್ಸ್ ಗ್ರೂಪ್ ಮತ್ತು ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಸಹಯೋಗದಲ್ಲಿ ಕರೋಕೆ ಹಾಡುಗಾರಿಕೆ ನಡೆಯಿತು. ಗಾಯನದಲ್ಲಿ ಆಸಕ್ತಿ ಇರುವಂತಹ ಹಾಗೂ ಸಮರ್ಪಕ ವೇದಿಕೆ ಸಿಗದಂತಹವರಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ಮೂರ‌್ನಾಲ್ಕು ತಿಂಗಳಿಗೊಮ್ಮೆ ವಿಶೇಷವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ.
ಇಡೀ ದಿನ ಹಾಡುಗಾರಿಕೆ ನಡೆಯಿತು. ಗಮನಾರ್ಹ ವಿಷಯವೆಂದರೆ ಈ ತಂಡದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಪೊಲೀಸ್, ಉಪನ್ಯಾಸಕರು ಸೇರಿದಂತೆ ಹಲವು ವರ್ಗದವರಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಸೇರಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅದರಂತೆ ಈ ಬಾರಿಯೂ ಕರೋಕೆ ಗಾಯನ ಗಮನಸೆಳೆಯಿತು. ಅಂತೆಯೇ ಮಕ್ಕಳ ಗಾಯನವೂ ವಿಶೇಷವಾಗಿತ್ತು.
ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್, ಸಬ್ಬನಹಳ್ಳಿ ವೆಂಕಟೇಶ್, ಸೌಮ್ಯಾ, ರೇಣುಕಾಪ್ರಸಾದ್, ಜೋಗಿಗೌಡ, ಮಹೇಶ್, ಸುಧೀರ್, ನಿರ್ಮಲಾ, ಲಕ್ಷ್ಮೀಪತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net