ಆಟೋ ಚಾಲಕರಿಂದ ಕನ್ನಡ ಪ್ರಚಾರ ಹೆಚ್ಚುತ್ತಿದೆ

 ಕೆ.ಆರ್.ಸಾಗರ ಗ್ರಾಮದ ಅರಳಿಕಟ್ಟೆ ಬಳಿಯ ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಸ್‌ಐ ರಮೇಶ ಕರ್ಕಿಕಟ್ಟೆ ಚಾಲನೆ ನೀಡಿ ಮಾತನಾಡಿದರು. ಪಾಪಣ್ಣ, ನಾಗೇಂದ್ರಕುಮಾರ್, ನರಸಿಂಹ, ಕೆ.ರಾಜು, ಮೂರ್ತಿ, ರವಿಕುಮಾರ್, ಸ್ವಾಮಿ ಇತರರಿದ್ದರು.
ಕೆ.ಆರ್.ಸಾಗರ ಗ್ರಾಮದ ಅರಳಿಕಟ್ಟೆ ಬಳಿಯ ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಸ್‌ಐ ರಮೇಶ ಕರ್ಕಿಕಟ್ಟೆ ಚಾಲನೆ ನೀಡಿ ಮಾತನಾಡಿದರು. ಪಾಪಣ್ಣ, ನಾಗೇಂದ್ರಕುಮಾರ್, ನರಸಿಂಹ, ಕೆ.ರಾಜು, ಮೂರ್ತಿ, ರವಿಕುಮಾರ್, ಸ್ವಾಮಿ ಇತರರಿದ್ದರು.
Published on
ಕೆ.ಆರ್.ಸಾಗರ: ಆಟೋ ಚಾಲಕರು ಹೊಂದಿರುವ ಕನ್ನಡ ಅಭಿಮಾನದಿಂದ ಇಂದಿಗೂ ಕನ್ನಡ ಇತರ ಭಾಷೆಗಳಿಗಿಂತ ಹೆಚ್ಚು ಪ್ರಚಾರದಲ್ಲಿದ್ದು, ಅನ್ಯ ಭಾಷಿಯರು ಕನ್ನಡ ಕಲಿಯಲು ಪ್ರೇರಿಪಿಸುತ್ತಿದೆ ಎಂದು ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸೈ ರಮೇಶ ಕರ್ಕಿಕಟ್ಟೆ ತಿಳಿಸಿದರು.
ಶುಕ್ರವಾರ ಕೆ.ಆರ್.ಸಾಗರ ಗ್ರಾಮದ ಅರಳಿಕಟ್ಟೆ ಬಳಿಯ ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಸುಂದರ ಭಾಷೆಯಾಗಿದ್ದು, ನಾವುಗಳು ಅನ್ಯ ಭಾಷೆಯ ವ್ಯಾಮೋಹಕ್ಕೆ ಒಳಾಗಗದೆ ಎಲ್ಲರ ಜತೆ ಕನ್ನಡ ವಾಣಿಜ್ಯ ಭಾಷೆಯಾಗಿ ಬಳಸಬೇಕು ಇದಕ್ಕೆ ಉತ್ತಮ ಉದಾಹರಣೆ ನಮ್ಮ ಆಟೋ ಚಾಲಕರಾಗಿದ್ದು, ಅವರಿಂದ ನಮ್ಮ ಮಾತೃ ಭಾಷೆ ಅನ್ಯಭಾಷಿಗರು ಮಾತನಾಡಲು ಪ್ರೇರೇಪಣೆ ಎಂದರು.
ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡಿನ ಎಲ್ಲೆಡೆ ಸುಂದರವಾಗಿ ನಡೆಯುತ್ತಿದ್ದು, ಅವರಲ್ಲಿನ ಕನ್ನಡ ಅಭಿಮಾನ ಹೃದಯಸ್ಪರ್ಶವಾಗಿದೆ ಎಂದರು. ನಂತರ ಸಂಜೆ ಸರಿಗಮಪ ಕಾರ್ಯಕ್ರಮದ ಪುರುಷೋತ್ತಮ ಮತ್ತು ಸಂಗಡಿಗರಿಂದ ಕನ್ನಡ ರಸ ಸಂಜೆ ಕಾರ್ಯಕ್ರಮ ನಡೆಯಿತು.
ಗ್ರಾಪಂ ಉಪಾಧ್ಯಕ್ಷ ಪಾಪಣ್ಣ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗೇಂದ್ರಕುಮಾರ್, ನರಸಿಂಹ, ಗ್ರಾ.ಪಂ ಸದಸ್ಯರಾದ ಕೆ.ರಾಜು, ಮೂರ್ತಿ, ರವಿಕುಮಾರ್, ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸ್ವಾಮಿ, ಸದಸ್ಯರಾದ ವೀರಣ್ಣ, ಕೃಷ್ಣ, ಸುನೀಲ್, ಮಂಜು, ದಿನೇಶ್, ನಂದೀಶ್, ಹರೀಶ್, ಚೇತನ್, ಸೇರಿದಂತೆ ಆಟೋ ಸಂಘದ ಸದಸ್ಯರು, ಮುಖಂಡರು, ಗ್ರಾಮಸ್ಥರು, ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net