ಜೆಡಿಎಸ್ ಹಳೇ ಮೈಸೂರಿಗೆ ಸೀಮಿತವಲ್ಲ

ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದ ಸಮೀಪ ಆಯೋಜಿಸಿದ್ದ ಜೆಡಿಎಸ್  ರಜತಾ ಮಹೋತ್ಸವ, ಜನರೊಂದಿಗೆ ಜನತಾದಳ ಮತ್ತು ಜೆಡಿಎಸ್ ಸದಸ್ಯತ್ವ ನೋಂದಾಣಿ ಅಭಿಯಾನ ಕಾರ್ಯಕ್ರಮವನ್ನು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೃಷ್ಣರೆಡ್ಡಿ ಇತರರು ಇದ್ದರು.
ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದ ಸಮೀಪ ಆಯೋಜಿಸಿದ್ದ ಜೆಡಿಎಸ್ ರಜತಾ ಮಹೋತ್ಸವ, ಜನರೊಂದಿಗೆ ಜನತಾದಳ ಮತ್ತು ಜೆಡಿಎಸ್ ಸದಸ್ಯತ್ವ ನೋಂದಾಣಿ ಅಭಿಯಾನ ಕಾರ್ಯಕ್ರಮವನ್ನು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೃಷ್ಣರೆಡ್ಡಿ ಇತರರು ಇದ್ದರು.
Published on
ಪಾಂಡವಪುರ: ಜೆಡಿಎಸ್ ಹಳೇ ಮೈಸೂರು ಪ್ರಾಂತ್ಯಕ್ಕೆ ಸೀಮಿತ ಎಂದು ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಗೂ ತೆರಳಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದ ಸಮೀಪ ಗುರವಾರ ಆಯೋಜಿಸಿದ್ದ ಪಕ್ಷದ ರಜತಾ ಮಹೋತ್ಸವ, ಜನರೊಂದಿಗೆ ಜನತಾದಳ ಮತ್ತು ಜೆಡಿಎಸ್ ಸದಸ್ಯತ್ವ ನೋಂದಾಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಸಂಘಟನೆಗಾಗಿ ಕಿತ್ತೂರು ಕರ್ನಾಟಕ, ಮಧ್ಯೆ ಕರ್ನಾಟಕ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ನಗರ ಸೇರಿದಂತೆ ಈಗಾಗಲೇ 16 ಸಾವಿರ ಕಿ.ಮೀ ವ್ಯಾಪ್ತಿ ಸಂಚರಿಸಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ಚುನಾವಣೆ ಸಂದರ್ಭ ಮತ್ತು ಇತರ ಕಾರಣಗಳಿಗಾಗಿ ಅನೇಕ ನಾಯಕರು ಸಂದರ್ಭಕ್ಕೆ ತಕ್ಕಂತೆ ಪಕ್ಷ ಕಟ್ಟಿದ್ದಾರೆ. ಆದರೆ ಯವುದೇ ಪಕ್ಷ ಅಸ್ಥಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜೆಡಿಎಸ್ ಪಕ್ಷ ಎರಡೂವರೆ ದಶಕಗಳಿಂದ ಹೋರಾಟದ ಮೂಲಕ ಅಸ್ಥಿತ್ವದಲ್ಲಿದೆ ಎಂದರು.
ಜೆಡಿಎಸ್ ಕನ್ನಡ ನಾಡಿನ ಅಸ್ಮಿತೆಗಾಗಿ ಹೋರಾಟ ಮಾಡಿಕೊಂಡು ಬಂದಿದೆ. ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗಾಗಿ ಹುಟ್ಟಿದೆ. ಹೋರಾಟ ಮತ್ತು ಚಳುವಳಿ ಕಾರಣಕ್ಕೆ ಜೆಡಿಎಸ್ ಮತ್ತು ಮಂಡ್ಯ ಜಿಲ್ಲೆ ನಡುವೆ ಗಟ್ಟಿಯಾದ ಸಂಬಂಧ ಏರ್ಪಟ್ಟಿದೆ. ದೇವೇಗೌಡರಿಗೆ 93ರ ಇಳಿ ವಯಸ್ಸಿನಲ್ಲೂ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ಹೋರಾಟದ ವಿಚಾರದಲ್ಲಿ ಎಚ್‌ಡಿಡಿ ಅವರ ದೂರದೃಷ್ಟಿ, ಬದ್ದತೆ ವ್ಯತ್ಯಾಸ ಕಾಣುತ್ತಿಲ್ಲ. ರಾಜ್ಯಸಭೆ ಸದಸ್ಯರಾಗಿ ಈಗಲೂ ರಾಜ್ಯಸಭೆಯಲ್ಲಿ ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆ ಹೆಚ್ಚು ದಊರ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ನೀಡಿದ ಆಡಳಿತವನ್ನು ರಾಜ್ಯದ ಜನರು ನೆನಪಿಸಿಕೊಳ್ಲುತ್ತಿದ್ದಾರೆ. ಎಚ್‌ಡಿಕೆ ರಾಜ್ಯ ರಾಜಕಾರಣಕ್ಕೆ ವಾಪಸ್ಸು ಬರಬೇಕು ಎಂಬುದು ಜನ ರಾಶಯವಾಗಿದೆ ಎಂದು ತಿಳಿಸಿದರು.
2023ರ ಚುನಾವಣೆಯಲ್ಲಿ ಸೋಲು : ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಜನರ ಆಶೀರ್ವಾದದಿಂದ ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಕೆಲಸ ಮಾಡಿದ್ದಾರೆ. 2023ರ ವಿಧನಸಭಾ ಚುನಾವಣೆಯಲ್ಲಿ ಸೋಲು ಕಂಡರು, ಆ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ವಿಧಾನಸಭೆ ಚುನಾವಣೆ ಬಳಿಕ ನಡೆದ ಎಲ್ಲಾ ಸಹಕಾ ಸಂಘಗಳ ಚುನಾವಣೆ ಮತ್ತು ಇನ್ನಿತರ ಚುನಾವಣೆಗಳಲ್ಲಿ ಕಾರ್ಯಕರ್ತರ ಜತೆ ನಿಂತು ಕೆಲಸ ಮಾಡಿದ್ದಾರೆ. ಎಚ್‌ಡಿಡಿ ದೇವೇಗೌಡರ ಗರಡಿಯಲ್ಲಿ ಸಿಎಸ್‌ಪಿ ಬೆಳೆದಿದ್ದಾರೆ. ಸಿಎಸ್‌ಪಿ ತಮ್ಮ ಅಧಿಕಾರವಧಿಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸಿದ್ದಾರೆ ಎಂದು ಬಣ್ಣಿಸಿದರು.
ತತ್ವ ಸಿದ್ಧಾಂತದಲ್ಲಿ ಬೆಳೆದ ಬಂದ ಪಕ್ಷ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾನು ರಾಜಕೀಯದಲ್ಲಿ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಇರುವವರೆಗೂ ಜನರ ಮಧ್ಯೆ ಇದ್ದು ಜನಪರ ಕೆಲಸ ಮಾಡುತ್ತೇನೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಜೆಡಿಎಸ್ ತತ್ವ ಸಿದ್ಧಾಂತದಲ್ಲಿ ಬೆಳೆದ ಬಂದ ಪಕ್ಷ. ಇಲ್ಲಿ ಯಾರೇ ತಪ್ಪು ಮಾಡಿದರು ತಪ್ಪೇ. ಜೆಡಿಎಸ್ ಕೋರ್ ಕಮಿಟಿ ಇದೆ. ಇಲ್ಲಿ ದೇವೇಗೌಡರು, ಎಚ್‌ಡಿ.ಕುಮಾರಸ್ವಾಮಿ ಅವರೆಲ್ಲ ಇರುತ್ತಾರೆ. ಇಲ್ಲಿ ಚರ್ಚೆ ನಡೆದು ಯಾರು ತಪ್ಪು ಮಾಡಿದ್ದರೂ ಅದಕ್ಕೆ ಕ್ರಮ ಆಗುತ್ತದೆ ಎಂದು ಪಕ್ಷದ ಆತಂರಿಕ ವಿಚಾರವಾಗಿ ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ರೈತರು, ಬಡವರು, ಧೀನ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಭಾರಿ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮಗಳನ್ನು ಯಾರೂ ಮರೆಯುವಂತಿಲ್ಲ. ತಮಿಳುನಾಡು ಚುನಾವಣೆಯಲ್ಲಿ ಅಲ್ಲಿನ ಟಿವಿಕೆ ಪಕ್ಷ ಯಶಸ್ಸು ಸಾಧಿಸಿದಂತೆ ಕರ್ನಾಟಕದಲ್ಲಿ ಎಚ್‌ಡಿಕೆ ನೇತೃತ್ವದಲ್ಲಿ ಜೆಡಿಎಸ್‌ಅಲೆ ಸೃಷ್ಟಿಸಲಿದೆ. ಆ ಶಕ್ತಿ ನಿಖಿಲ್ ಕುಮಾರಸ್ವಾಮಿ ಅವರಿಗಿದೆ. 1977ರ ತುರ್ತು ಪರಿಸ್ಥಿತಿ ನಂತರ ಜೆ.ಪಿ. ನಾರಾಯಣ್ ನೇತೃತ್ವದಲ್ಲಿ ನಡೆದ ಹೋರಾಟದ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಹಕಾರದೊಂದಿಗೆ ಕೇಂದ್ರದಲ್ಲಿ ಕಾಂಗ್ರೆಸೆೃೀತರ ಸರ್ಕಾರ ಅಧಿಕಾರ ಪಡೆಯಿತು. ಅನೇಕ ರಾಜಕೀಯ ವಿದ್ಯಾಮಾನಗಳು ನಡೆದರು ದೇವೇಗೌಡರು ವಿಚಲಿತರಾಗದೆ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.
51 ಸಾವಿರ ಮತ ಲೀಡ್ : 1994 ರಲ್ಲಿ ದೇವೇಗೌಡರು ನನಗೆ ಬಿ ಫಾರಂ ಕೊಟ್ಟರು. ಸೋತರೆ ಎಲ್ಲಿ ದೇವೇಗೌಡರ ಗೌರವಕ್ಕೆ ಧಕ್ಕೆ ಆಗುತ್ತದೆ ಎಂದು ಅದನ್ನು ಮಾಜಿ ಶಾಸಕ ಕೆಂಪೇಗೌಡರಿಗೆ ನೀಡಿದೆ. 1999ರಲ್ಲಿ ಪಕ್ಷದಿಂದ ನಿಂತು ಸೋತರು ದೇವೇಗೌಡರು ನನ್ನ ಕೈ ಬಿಡದೆ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದರು. ಈ ಅವಧಿಯಲ್ಲಿ ಸ್ಥಳೀಯ ಚುನಾವಣೆಗಳನ್ನು ಎದುರಿಸಿ ಪಕ್ಷಕ್ಕೆ ಗೆಲವು ತಂದುಕೊಟ್ಟೆ. ಖಲೆದ ಲೋಕಸಭೆ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭ ಕ್ಷೇತ್ರ ಎಚ್‌ಡಿಕೆ ಅವರಿಗೆ 51 ಸಾವಿರ ಮತ ಲೀಡ್ ನೀಡಿದೆ ಎಂದು ಹೇಳಿದರು.
ಇದಕ್ಕೆ ಮೊದಲು ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ತೆರೆದ ವಾಹನದಲ್ಲಿ ವೇದಿಕೆಗೆ ಕರೆತರಲಾಯಿತು. ಈ ವೇಳೆ ಅಭೀಮಾನಿಗಳು ಕ್ರೇನ್‌ಗಳ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣರೆಡ್ಡಿ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಅನ್ನದಾನಿ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಜಿ.ಬಿ.ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ರಾಮಚಂದ್ರ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net