ಮದ್ದೂರಿನಲ್ಲಿ ದನಗಳ ಜಾತ್ರೆ ಸಂಭ್ರಮ

ಮದ್ದೂರು ಐತಿಹಾಸಿಕ  ದನಗಳ ಜಾತ್ರೆ ಮೈದಾನಕ್ಕೆ ಶಾಸಕ ಕೆ.ಎಂ.ಉದಯ್ ಬುಧವಾರ  ಭೇಟಿ ನೀಡಿ ರೈತರ ಸಂಭ್ರಮದಲ್ಲಿ ಭಾಗಿಯಾದರು. ವಿನುತಾ ಉದಯ್, ಎಚ್.ಎಲ್.ಸತೀಶ್, ಕೆ.ಎಂ.ರವಿ, ನಿತಿನ್, ಮಹದೇವಯ್ಯ, ಚಂದ್ರನಾಯಕ್ ಇದ್ದರು.
ಮದ್ದೂರು ಐತಿಹಾಸಿಕ ದನಗಳ ಜಾತ್ರೆ ಮೈದಾನಕ್ಕೆ ಶಾಸಕ ಕೆ.ಎಂ.ಉದಯ್ ಬುಧವಾರ ಭೇಟಿ ನೀಡಿ ರೈತರ ಸಂಭ್ರಮದಲ್ಲಿ ಭಾಗಿಯಾದರು. ವಿನುತಾ ಉದಯ್, ಎಚ್.ಎಲ್.ಸತೀಶ್, ಕೆ.ಎಂ.ರವಿ, ನಿತಿನ್, ಮಹದೇವಯ್ಯ, ಚಂದ್ರನಾಯಕ್ ಇದ್ದರು.
Published on
ಮದ್ದೂರು : ಐತಿಹಾಸಿಕ ಹಿನ್ನೆಲೆಯುಳ್ಳ ಮದ್ದೂರಿನ ದನಗಳ ಜಾತ್ರೆಯು ಈ ಬಾರಿ ಭರ್ಜರಿಯಾಗಿ ನಡೆಯುತ್ತಿದೆ. ಸಾವಿರಾರು ಜನರ ಸಂಗಮವಾಗಿರುವುದು ವಿಶೇಷವಾಗಿದೆ.
ಮಂಗಳವಾರ ಜಾತ್ರಾ ಮೈದಾನಕ್ಕೆ ಶಾಸಕ ಕೆ.ಎಂ.ಉದಯ್ ಭೇಟಿ ನೀಡಿ ರೈತರ ಸಂಭ್ರಮದಲ್ಲಿ ಭಾಗಿಯಾದರು. ಜಾತ್ರಾ ಮೈದಾನಕ್ಕೆ ಆಗಮಿಸಿದ ಶಾಸಕರು, ಸಾಲು ಸಾಲಾಗಿ ನಿಂತಿದ್ದ ಎತ್ತುಗಳನ್ನು ವೀಕ್ಷಿಸಿದರು.ರೈತರ ಬಳಿ ತೆರಳಿ ರಾಸುಗಳ ತಳಿ, ಅವುಗಳ ಪೋಷಣೆ ಮತ್ತು ಬೆಲೆಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಮಣ್ಣಿನ ಸಂಸ್ಕೃತಿಯಲ್ಲಿ ಜಾನುವಾರುಗಳು ಕೇವಲ ಪ್ರಾಣಿಗಳಲ್ಲ, ಅವು ರೈತ ಕುಟುಂಬದ ಅವಿಭಾಜ್ಯ ಅಂಗ. ದೇವತಾ ಸ್ವರೂಪ . ಇಂತಹ ಭಾರಿ ಜಾತ್ರೆಗಳು ರೈತರಲ್ಲಿ ಉತ್ಸಾಹ ತುಂಬುತ್ತಿವೆ ಎಂದರು. ಬೃಹತ್ ಜಾತ್ರೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಹಳ್ಳಿಕಾರ್ ಸೇರಿದಂತೆ ವಿವಿಧ ತಳಿಯ ಎತ್ತುಗಳ ವಿಶೇಷತೆ ತಿಳಿದುಕೊಂಡಿದ್ದೇನೆ. ಬರಗಾಲದ ನಡುವೆಯೂ ರೈತರು ಸಾಂಪ್ರದಾಯಿಕ ಕೃಷಿ ಮತ್ತು ಜಾನುವಾರು ಪೋಷಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸ ಎಂದರು.
ದನಗಳ ಜಾತ್ರೆಗೆ ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ರೈತರು ಮತ್ತು ವ್ಯಾಪಾರಿಗಳು ಆಗಮಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ವಿನುತಾಕೆ.ಎಂ.ಉದಯ್, ಉದ್ಯಮಿ ಎಚ್.ಎಲ್.ಸತೀಶ್, ಮುಖಂಡರಾದ ಕೆ.ಎಂ.ರವಿ, ನಿತಿನ್, ಮಹದೇವಯ್ಯ, ಚಂದ್ರನಾಯಕ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net