ಮದ್ದೂರು ನಗರದ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಮದ್ದೂರು ಅರ್ಜುನಪುರಿ ಆಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಬಿ.ಸಿ.ರಾಯ್ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಅಭಿನಂದಿಸಲಾಯಿತು. ಕವಿತಾ, ಯು.ಎಸ್.ರವಿ, ಸುನೀತಾ, ನಾಗರಾಜು, ಚಿಕ್ಕಣ್ಣಗೌಡ ಇದ್ದರು.
ಮದ್ದೂರು:ವೈದ್ಯರು ಆಧುನಿಕ ಧನ್ವಂತರಿಗಳು. ವೈದ್ಯರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಗರದ ಸರ್ಕಾರಿ ಆಯುಷ್ ಆಸ್ಪತ್ರೆಯ ಮುಖ್ಯ ಅಧಿಕಾರಿ ಕವಿತಾ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಮದ್ದೂರು ಅರ್ಜುನಪುರಿ ಆಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಬಿ.ಸಿ.ರಾಯ್ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿದರು. ವೈದ್ಯರು ಸ್ವಂತ ಬದುಕಿಗೆ ಸಮಯವನ್ನೂ ಮೀಸಲಿಡದೇ ಸಾರ್ವಜನಿಕ ಅರೋಗ್ಯಕ್ಕಾಗಿ ಮಿಡಿಯುವ ವೈದ್ಯರು ನಿಜಕ್ಕೂ ಅಭಿನಂದನಾರ್ಹರು ಎಂದರು.
ಪ್ರಾಂತೀಯ ಅಧ್ಯಕ್ಷ ಕೆ.ಪುಟ್ಟಲಿಂಗಯ್ಯ ಮಾತನಾಡಿ, ಸದೃಢ ಅರೋಗ್ಯಕರ ಸಮಾಜ ನಿರ್ಮಿಸುವುದರಲ್ಲಿ ವೈದ್ಯರ ಸೇವೆ ಅನನ್ಯ. ಹಾಗಾಗಿ ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎನ್ನುವುದು. ಹಾಗಾಗಿ ವೈದ್ಯರನ್ನು ಗುರುತಿಸಿ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಪ್ರವೀಣ್‌ಕುಮಾರ್ ಹಾಗೂ ಡಾ.ಸಿಂಧೂ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಎರಡನೇ ಜಿಲ್ಲಾ ಉಪ ಪ್ರಾಂತಪಾಲ ಎಂ.ಎನ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಅರ್ಜುನಪುರಿ ಆಲಯನ್ಸ್ ಕ್ಲಬ್ನಿನ ಅಧ್ಯಕ್ಷ ಯು.ಎಸ್.ರವಿ, ಕಾರ್ಯದರ್ಶಿ. ಎಚ್. ಸುನೀತಾ, ಜಿಲ್ಲಾ ಸಂಪುಟ ಖಜಾಂಚಿ ವಿ.ಎಸ್.ನಾಗರಾಜು, ಅಡ್ವೋಕೇಟ್ ಆಲಯನ್ಸ್ ಕ್ಲಬ್‌ನ ಚಿಕ್ಕಣ್ಣಗೌಡ, ಕೃಷ್ಣ, ಆಲಯನ್ಸ್ ಕ್ಲಬ್‌ಗಳ ಸದಸ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.