ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುವುದು ಅಗತ್ಯ

ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಲ್.ಆರ್.ಅಶ್ವಿನ್, ಎಂ.ಮರಿಹೆಗ್ಗಡೆ, ಬಿ.ಪಿ.ಪ್ರಫುಲ್ಲಾ ಚಂದ್ರ, ಎಚ್.ರಾಜು, ಜವರ ಹೆಗ್ಗಡೆ, ಚೆನ್ನೇಶ್ ಇದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಲ್.ಆರ್.ಅಶ್ವಿನ್, ಎಂ.ಮರಿಹೆಗ್ಗಡೆ, ಬಿ.ಪಿ.ಪ್ರಫುಲ್ಲಾ ಚಂದ್ರ, ಎಚ್.ರಾಜು, ಜವರ ಹೆಗ್ಗಡೆ, ಚೆನ್ನೇಶ್ ಇದ್ದರು.
Published on
ಮದ್ದೂರು: ಕುರುಬ ಸಮುದಾಯದ ಜನರು ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಲ್.ಆರ್.ಅಶ್ವಿನ್ ಹೇಳಿದರು.
ನಗರದ ಮಳವಳ್ಳಿ ರಸ್ತೆಯ ತಾಲೂಕು ಕುರುಬರ ಸಂಘದದಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಂಘವು ಸಮುದಾಯ ಹಾಗೂ ಸಂಘದ ಸರ್ವತೋಮುಖ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಮುದಾಯದ ಜನರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಹಾಲಿ ನಿರ್ಮಾಣ ಹಂತದಲ್ಲಿರುವ 2ನೇ ಹಂತದ ಕಟ್ಟಡವನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಸಂಘದ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸದಸ್ಯರು ಸಲಹೆ ನೀಡಿದರು. ಸಭೆಯಲ್ಲಿ ನಿಕಟಪೂರ್ವ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗೌರವಾಧ್ಯಕ್ಷ ಎಂ.ಮರಿಹೆಗ್ಗಡೆ, ಉಪಾಧ್ಯಕ್ಷ ಬಿ.ಪಿ.ಪ್ರಫುಲ್ಲಾ ಚಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ರಾಜು, ಖಜಾಂಚಿ ಜವರ ಹೆಗ್ಗಡೆ, ಸಹ ಕಾರ್ಯದರ್ಶಿ ಚೆನ್ನೇಶ್, ಸಂಘಟನಾ ಕಾರ್ಯದರ್ಶಿ ಡಿ.ಕುಮಾರ, ನಿರ್ದೇಶಕರಾದ ಭರತೇಶ್, ಮಲವರಾಜ್, ಜೋಗಯ್ಯ, ಎಸ್.ಬೀರೇಶ್, ಕುಮಾರ್‌ಹೆಗ್ಗಡೆ, ಮಲ್ಲೇಶ್, ಚಿಕ್ಕಣ್ಣ, ಕಾಂತರಾಜು, ರೇಣುಕಪ್ಪ, ಬೋರಯ್ಯ, ಬೀರೇಶ್, ಹುಚ್ಚಮರಿ, ಭವ್ಯಶ್ರೀ, ಮಂಜುಳಾ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net