ಅಕ್ಷರಾಭ್ಯಾಸದಿಂದ ಜ್ಞಾನದ ಜಗತ್ತು ಪರಿಚಯ

ಮದ್ದೂರು ನಗರದ ಚಾಮನಹಳ್ಳಿಯಲ್ಲಿರುವ ಸನ್‌ರೈನ್ ಕಾನ್ವೆಂಟ್‌ನಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಅಧ್ಯಕ್ಷ ಪಿ.ರಾಜೀವ್ ಚಾಲನೆ ನೀಡಿದರು. ಸಿ.ಟಿ.ಮಹೇಂದ್ರ, ಸುಮಾ, ಜಬೀನ್‌ತಾಜ್, ರಮ್ಯಾ, ಜ್ಯೋತಿ, ವಿದ್ಯಾ, ಇಂದು, ಕುಮಾರ್, ಶಿವಶಂಕರ್, ಸುನಿತಾ, ರಾಣಿ ಇದ್ದರು.
ಮದ್ದೂರು ನಗರದ ಚಾಮನಹಳ್ಳಿಯಲ್ಲಿರುವ ಸನ್‌ರೈನ್ ಕಾನ್ವೆಂಟ್‌ನಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಅಧ್ಯಕ್ಷ ಪಿ.ರಾಜೀವ್ ಚಾಲನೆ ನೀಡಿದರು. ಸಿ.ಟಿ.ಮಹೇಂದ್ರ, ಸುಮಾ, ಜಬೀನ್‌ತಾಜ್, ರಮ್ಯಾ, ಜ್ಯೋತಿ, ವಿದ್ಯಾ, ಇಂದು, ಕುಮಾರ್, ಶಿವಶಂಕರ್, ಸುನಿತಾ, ರಾಣಿ ಇದ್ದರು.
Published on
ಮದ್ದೂರು: ಅಕ್ಷರಾಭ್ಯಾಸ ಎಂದರೆ ಮಗುವಿನ ಔಪಚಾರಿಕ ಶಿಕ್ಷಣ ಮತ್ತು ಜ್ಞಾನದ ಜಗತ್ತನ್ನು ಪರಿಚಯಿಸುವ ಪವಿತ್ರ ಹಿಂದೂ ಸಂಪ್ರದಾಯವಾಗಿದೆ ಎಂದು ಸನ್‌ರೈಸ್ ಕಾನ್ವೆಂಟ್‌ನ ಅಧ್ಯಕ್ಷ ಪಿ.ರಾಜೀವ್ ತಿಳಿಸಿದರು.
ನಗರದ ಚಾಮನಹಳ್ಳಿಯಲ್ಲಿರುವ ಸನ್‌ರೈನ್ ಕಾನ್ವೆಂಟ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಅಂತಹ ಮಕ್ಕಳು ವಿದ್ಯಾಪಾರಂಗತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಅಕ್ಷರಾಭ್ಯಾಸದಿಂದ ಮಗುವಿಗೆ ಜ್ಞಾನ ದೇವತೆಯಾದ ಸರಸ್ವತಿ, ಗಣಪತಿ ಆಶೀರ್ವಾದ ಸಿಗುತ್ತದೆ. ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿ ವರ್ಷ ನಮ್ಮ ಶಾಲೆಯಲ್ಲಿ 2 ರಿಂದ 5 ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಾನ್ವೆಂಟ್‌ನ ಕಾರ್ಯದರ್ಶಿ ಸಿ.ಟಿ.ಮಹೇಂದ್ರ ಮಾತನಾಡಿ, ಕಾನ್ವೆಂಟ್‌ನಲ್ಲಿ ಉತ್ತಮ ಪರಿಸರದ ಮಧ್ಯೆ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ತಿಳಿಸುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. ಅಕ್ಷರಭ್ಯಾಸದ ಕಾರ್ಯಕ್ರಮದ ನೇತೃತ್ವವನ್ನು ರವಿ ಆಚಾರ್ ವಹಿಸಿದ್ದರು. ಮುಖ್ಯ ಶಿಕ್ಷಕಿ ಎಸ್.ಸುಮಾ, ಶಿಕ್ಷಕರಾದ ಜಬೀನ್‌ತಾಜ್, ರಮ್ಯಾ, ಜ್ಯೋತಿ, ವಿದ್ಯಾ, ಇಂದು, ಕುಮಾರ್, ಶಿವಶಂಕರ್, ಸುನಿತಾ, ರಾಣಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net