ಕೆರೆ ಕಟ್ಟೆಗೆ ನೀರು ತುಂಬಿಸಲು ಪಟ್ಟು

ಕೆರೆ ಕಟ್ಟೆಗೆ ನೀರು ತುಂಬಿಸಲು ಒತ್ತಾಯಿಸಿ ಕಿಕ್ಕೇರಿಯ ಹೇಮಾವತಿ ನಾಲೆ ಉಪವಿಭಾಗ ಕಚೇರಿ ಮುಂದೆ ಬುಧವಾರ ರೈತರು ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು. ಶಾಮಣ್ಣ, ಕೆಂಪಣ್ಣ, ಶಂಭುಲಿಂಗ, ಸುರೇಶ್, ರಾಜಣ್ಣ, ಆನಂದ್, ಮಂಜೇಗೌಡ, ಕಿಕ್ಕೇರಿಗೌಡ, ಯೋಗೇಶ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಿಕ್ಕೇರಿಯ ಹೇಮಾವತಿ ನಾಲೆ ಉಪವಿಭಾಗ ಕಚೇರಿ ಮುಂದೆ ಪ್ರತಿಭಟನೆ
ಕಿಕ್ಕೇರಿ: ಕೆರೆ ಕಟ್ಟೆಗೆ ನೀರು ತುಂಬಿಸಲು ಒತ್ತಾಯಿಸಿ ಕಿಕ್ಕೇರಿಯ ಹೇಮಾವತಿ ನಾಲೆ ಉಪವಿಭಾಗ ಕಚೇರಿ ಮುಂದೆ ಬುಧವಾರ ರೈತರು ಅಡುಗೆ ತಯಾರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಸದಸ್ಯ ಶಾಮಣ್ಣ ಮಾತನಾಡಿ, ಗುರುಗಾರನಹಳ್ಳಿಯಿಂದ ಆರಂಭವಾಗುವ ನಂ. 47 ಡಿಸ್ಟ್ರಿಬ್ಯೂಷನ್ ನಾಲೆಯಿಂದ ಬಿದರಹಳ್ಳಿ ಗ್ರಾಮದವರಿಗೆ ಸುಮಾರು 30 ಹಳ್ಳಿಗಳಿವೆ. ಇಲ್ಲಿನ ಜನರಿಗೆ ಈ ನಾಲೆಯೇ ಆಶ್ರಯವಾಗಿದೆ. ನಾಲೆ ಉದ್ದಕ್ಕೂ ಕಳಪೆ ಕಾಮಗಾರಿ ಆಗಿದ್ದು, ಲೈನಿಂಗ್ ಇಲ್ಲ. ಪರಿಣಾಮ ಯಾರಿಗೂ ಸರಿಯಾಗಿ ನೀರು ಸಿಗುತ್ತಿಲ್ಲ. ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ನಾಲೆಯಲ್ಲಿನ ಹಳ್ಳ ದಿಣ್ಣೆಯ ಉಬ್ಬು ಸರಿಪಡಿಸಬೇಕು ಎಂದರು.
ವಡ್ಡರಹಳ್ಳಿವರೆಗೆ ನೀರು ಹರಿದು ಮುಂದೆ ನೀರು ಬಂದಿಲ್ಲ. ಲಕ್ಷ್ಮೀಪುರ, ಗೋವಿಂದನಹಳ್ಳಿ, ಈಚಲುಗುಡ್ಡೆ ಕಾವಲು, ಬಿದರಹಳ್ಳಿ, ಗಂಗೇನಹಳ್ಳಿ, ಮಾರ್ಗೋನಹಳ್ಳಿ, ತೆಂಗಿನಘಟ್ಟ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ ಎಂದು ಕ್ರೋಶ ವ್ಯಕ್ತಪಡಿಸಿದರು.
ಕೆಂಪಣ್ಣ, ಶಂಭುಲಿಂಗ, ಸುರೇಶ್, ರಾಜಣ್ಣ, ಆನಂದ್, ಮಂಜೇಗೌಡ, ಕಿಕ್ಕೇರಿಗೌಡ, ಯೋಗೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net