ಹೊಂಗನೂರಮ್ಮ ದೇಗುಲ ಉದ್ಘಾಟನೆ

ಕಿಕ್ಕೇರಿ ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ಹೊಂಗನೂರಮ್ಮ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಗುಲ ಅಭಿವೃದ್ಧಿಗೆ ಆರ್‌ಟಿಒ ಮಲ್ಲಿಕಾರ್ಜುನ ಧನ ಸಹಾಯ ನೀಡಿದರು. ಸುರೇಶ್, ಮಂಜುನಾಥ್, ರಮೇಶ್, ನಾಗರಾಜು, ಶಿವಣ್ಣ, ಯೋಗೇಶ್, ಗಿರೀಶ್ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ಹೊಂಗನೂರಮ್ಮ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಗುಲ ಅಭಿವೃದ್ಧಿಗೆ ಆರ್‌ಟಿಒ ಮಲ್ಲಿಕಾರ್ಜುನ ಧನ ಸಹಾಯ ನೀಡಿದರು. ಸುರೇಶ್, ಮಂಜುನಾಥ್, ರಮೇಶ್, ನಾಗರಾಜು, ಶಿವಣ್ಣ, ಯೋಗೇಶ್, ಗಿರೀಶ್ ಮತ್ತಿತರರಿದ್ದರು.
Published on
ಕಿಕ್ಕೇರಿ: ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ನೂತನ ಹೊಂಗನೂರಮ್ಮ ದೇಗುಲ ಇತ್ತೀಚೆಗೆ ಉದ್ಘಾಟನೆಯಾಯಿತು.
ದೇಗುಲ ಉದ್ಘಾಟನೆಗೆ ಮುನ್ನ ಸಮೀಪದ ಹೇಮಾವತಿ ನದಿಯಿಂದ ಪೂರ್ಣಕುಂಭದೊಂದಿಗೆ ಗಂಗೆಯನ್ನು ತರಲಾಯಿತು. ಮಂಗಳವಾದ್ಯದೊಂದಿಗೆ ದೇವಿಗೆ ಗಂಗಾಜಲಾಭಿಷೇಕ ನೆರವೇರಿಸಲಾಯಿತು. ಪೂರ್ಣಕುಂಭ ಕಳಸ ಮೆರವಣಿಗೆಯೊಂದಿಗೆ ಮಹಿಳೆಯರು ಮಂಗಳವಾದ್ಯದೊಂದಿಗೆ ದೇಗುಲಕ್ಕೆ ಸಾಗಿದರು.
ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ದೇಗುಲ ಅಭಿವೃದ್ಧಿಗೆ ಧನ ಸಹಾಯ ಸಮರ್ಪಿಸಿ ಮಾತನಾಡಿ, ಪ್ರತಿ ಹಳ್ಳಿಗೆ ಒಂದು ದೇಗುಲವಿದ್ದರೆ ಗ್ರಾಮದಲ್ಲಿ ಶಾಂತಿ ಲಭಿಸಲಿದೆ. ಅಧ್ಯಾತ್ಮ, ಧಾರ್ಮಿಕ ಚಿಂತನೆಯಿಂದ ಗ್ರಾಮದಲ್ಲಿ ಸಕಾರಾತ್ಮಕ ಶಕ್ತಿ ಲಭಿಸಲಿದೆ. ಗ್ರಾಮ ಆರೋಗ್ಯಕ್ಕೆ ಸನಾತನ ಸಂಸ್ಕೃತಿ ಉಳಿಸಿ, ಯುವಕರಲ್ಲಿ ಧಾರ್ಮಿಕ ಭಾವನೆ ಮೂಡಲು ಅರಿವು ಮೂಡಿಸಿ ಎಂದರು.
ಗ್ರಾಮದಲ್ಲಿ ತಳಿರು ತೋರಣ, ರಂಗೋಲಿ ಬಿಡಿಸಿ ದೊಡ್ಡಹಬ್ಬದಂತೆ ಸಂಭ್ರಮಿಸಿದರು. ದೇಗುಲದ ಸುತ್ತ ದಿಗ್ಬಂಧನ ಬಲಿ ಪೂಜೆ, ವಿವಿಧ ಹೋಮ ಹವನಾದಿ, ಅಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ನೆರವೇರಿತು. ಅನ್ನ ದಾಸೋಹ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಸಿ ಸದಸ್ಯ ಸುರೇಶ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್ (ಸಿಮೆಂಟ್ ಮಂಜು), ನಿರ್ದೇಶಕ ಚಂದ್ರೆಗೌಡ, ಮುಖಂಡರಾದ ಎಂ.ಕೆ.ನಾಗರಾಜು, ಅಯ್ಯಪ್ಪಸ್ವಾಮಿ ಮಂಜುನಾಥ್, ಎಂ.ಕೆ.ಶ್ರೀನಿವಾಸ್, ಎಂ.ಬಿ ಶಿವಣ್ಣ, ಯೋಗೇಶ್ ಎಂ.ಕೆ. ಗಿರೀಶ್, ರಮೇಶ್, ಗ್ರಾ.ಪಂ. ಸದಸ್ಯ ಶಿವಣ್ಣ, ಅರ್ಚಕ ಜಗದೀಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net