ಸೌಹಾರ್ದ ಸಾರಲು ಇಫ್ತಾರ್ ಕೂಟ ಸಹಕಾರಿ

 ಕನಕಪುರ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಆವರಣದಲ್ಲಿ ಇಫ್ತಾರ್ ಕೂಟದಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
ಕನಕಪುರ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಆವರಣದಲ್ಲಿ ಇಫ್ತಾರ್ ಕೂಟದಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಬಾ ಮಸೀದಿ ಅಧ್ಯಕ್ಷ ಹಫೀಜ್ ಉಲ್ಲಾ ಉರ್ಫ್ ವಂದ್ರಿ ಬಾಬು ಅಭಿಪ್ರಾಯ
ಹಲಗೂರು: ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಆವರಣದಲ್ಲಿ ಇತ್ತೀಚೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವತಿಯಿಂದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಕುಬಾ ಮಸೀದಿ ಅಧ್ಯಕ್ಷ ಹಫೀಜ್ ಉಲ್ಲಾ ಉರ್ಫ್ ವಂದ್ರಿ ಬಾಬು ಮಾತನಾಡಿ, ಸಮಾಜದಲ್ಲಿರುವ ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ಇದನ್ನು ಜನರಿಗೆ ತಿಳಿಸಲು ಇಫ್ತಾರ್ ಸೌಹಾರ್ದ ಕೂಟಗಳಂತಹ ಕಾರ್ಯಕ್ರಮ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾರಾಯಣಗೌಡ ಮಾತನಾಡಿ, ಇಫ್ತಾರ್ ಕೂಟವೂ ಕೇವಲ ಧಾರ್ಮಿಕ ಆಚರಣೆಯಲ್ಲ. ಬದಲಿಗೆ ವಿವಿಧ ಸಮುದಾಯಗಳ ನಡುವೆ ಪ್ರೀತಿ, ಶಾಂತಿ ಮತ್ತು ಸೌಹಾರ್ದತೆ ಉತ್ತೇಜಿಸುವ ಕಾರ್ಯಕ್ರಮ ಆಗಿದೆ. ಕ್ಷೇತ್ರದ ಶಾಸಕರು ನೀಡಿರುವ ಇಫ್ತಾರ್ ಕೂಟವು ಸಹ ಸರ್ವ ಧರ್ಮದ ಜನರು ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಮಳವಳ್ಳಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸದ್ರುಲ್ಲಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜಮೀಲ್ ಪಾಷಾ, ಮಸೀದಿ ಅಧ್ಯಕ್ಷ ಅಮೀರ್ ಸಾಬ್, ಫಹೀಮ್ ಉಲ್ಲಾ, ಮುಖಂಡರಾದ ಅಹ್ಮದ್ ಪಾಷಾ, ಅಕ್ಬರ್, ಪರ್ಮಾನ್ ಪಾಷಾ, ಸಿಬ್ಗತ್ ಉಲ್ಲಾ, ಮುನಾವರ್ ಪಾಷಾ, ಅಬ್ಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net