ಸಂಘಟಿತರಾದರೆ ಬೇಡಿಕೆ ಈಡೇರಿಕೆ ಸಾಧ್ಯ

ಮದ್ದೂರು ನಗರದ ಶೇಖರ್ ಗ್ರಾೃಂಡ್ ಸಭಾಂಗಣದಲ್ಲಿ ತಾಲೂಕು  ಮದ್ಯ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಮಹೇಶ್ ಉದ್ಘಾಟಿಸಿದರು. ನಾಗಸೇನಾ, ಸೋಮಶೇಖರ್, ಸಿದ್ದರಾಜು, ದಾಸೇಗೌಡ, ಪ್ರವೀಣ್ ಕುಮಾರ್, ಕೃಷ್ಣಪ್ಪ ಇದ್ದರು.
ಮದ್ದೂರು ನಗರದ ಶೇಖರ್ ಗ್ರಾೃಂಡ್ ಸಭಾಂಗಣದಲ್ಲಿ ತಾಲೂಕು ಮದ್ಯ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಮಹೇಶ್ ಉದ್ಘಾಟಿಸಿದರು. ನಾಗಸೇನಾ, ಸೋಮಶೇಖರ್, ಸಿದ್ದರಾಜು, ದಾಸೇಗೌಡ, ಪ್ರವೀಣ್ ಕುಮಾರ್, ಕೃಷ್ಣಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮದ್ಯ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್ ಹೇಳಿಕೆ
  • ವಾರ್ಷಿಕ ಮಹಾಸಭೆ
ಮದ್ದೂರು : ಪಟ್ಟಣದ ಶೇಖರ್ ಗ್ರಾೃಂಡ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮದ್ಯ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್ ಮಾತನಾಡಿ, ಮದ್ಯ ಮಾರಾಟಗಾರರಿಗೆ ಇತ್ತೀಚಿನ ವರ್ಷಗಳಲ್ಲಿ ಹಲವು ಸಮಸ್ಯೆಗಳು ಇದ್ದು, ಅವುಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಘದ ಸದಸ್ಯರು ಸಂಘಟಿತರಾಗಿರಬೇಕು ಆಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಜಿಲ್ಲಾ ವ್ಯಾಪ್ತಿಯಲ್ಲಿರುವ ಸನ್ನದುದಾರರು ಏನೇ ಸಮಸ್ಯೆಗಳಿದ್ದರೂ ಸಂಘದ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಉಪ ಆಯುಕ್ತ ನಾಗಸೇನಾ, ಉಪ ಅಧೀಕ್ಷಕ ಸೋಮಶೇಖರ್, ಕೆಎಸ್‌ಬಿಬಿಸಿಎಲ್ ಮೇಲ್ವಿಚಾರಕ ಸಿದ್ದರಾಜು, ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸ್ತೂರು ದಾಸೇಗೌಡ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಕಾರ್ಯದರ್ಶಿ ಕೆ.ಟಿ.ಶಂಕರೇಗೌಡ, ಖಜಾಂಚಿ ಕೃಷ್ಣಪ್ಪ, ಸಂಚಾಲಕ ಶಿವಕುಮಾರ್, ಪರಶುರಾಮ್, ಪದಾಧಿಕಾರಿಗಳಾದ ಬಿ.ಟಿ.ಸಿದ್ದರಾಮಯ್ಯ, ಮಧುಕುಮಾರ್, ಶಿವಪ್ಪ, ಗಿರೀಶ, ಶೇಖರ, ಗೋಪಿ, ಮುತ್ತುರಾಜು, ಬಾಲಕೃಷ್ಣ, ಕಾಟಿ ಕೃಷ್ಣ, ಲೋಕೆಶ್, ನಾಗೇಶ್, ಅಭಿಷೆಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net