30ರೊಳಗೆ ಪ್ರೋತ್ಸಾಹ ಧನ ಕೊಡದಿದ್ದರೆ ಚಳವಳಿ

ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ವಿನೋದ್‌ಬಾಬು, ರಾಮಚಂದ್ರರಾವ್, ಗೌರಿ ಪ್ರಕಾಶ್, ಚಂದ್ರಶೇಖರ್, ಮಹದೇವಪ್ಪ ಹಾಗೂ ಪಾಂಡು ಇದ್ದರು.
ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ವಿನೋದ್‌ಬಾಬು, ರಾಮಚಂದ್ರರಾವ್, ಗೌರಿ ಪ್ರಕಾಶ್, ಚಂದ್ರಶೇಖರ್, ಮಹದೇವಪ್ಪ ಹಾಗೂ ಪಾಂಡು ಇದ್ದರು.
Published on
ಮದ್ದೂರು: ಕಬ್ಬು ಅರೆಯಲು ರೈತರು ಅಗತ್ಯ ಸಹಕಾರ ನೀಡಬೇಕು ಎಂದು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆಯ ಅಡಳಿತ ಮಂಡಳಿ ಮನವಿ ಮಾಡಿತು.
ಕಾರ್ಖಾನೆಯ ಅಡಳಿತ ಮಂಡಳಿಯಿಂದ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ, ರೈತರಿಗೆ ಕೊಡಬೇಕಾಗಿರುವ 50 ರೂ. ಪ್ರೋತ್ಸಾಹ ಧನವನ್ನು ತಕ್ಷಣವೇ ರೈತರಿಗೆ ಪಾವತಿಸಬೇಕೆಂದು ಕಬ್ಬು ಬೆಳೆಗಾರರು ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟು ಹಿಡಿದರು.
ರೈತರಿಗೆ ಕೊಡಬೇಕಾಗಿರುವ 50 ರೂ.ಗಳ ಪ್ರೋತ್ಸಾಹ ಧನದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಶೀಘ್ರ ರೈತರ ಪರವಾಗಿ ತೀರ್ಪು ಬರಬಹುದು. ತೀರ್ಪು ಬಂದ ತಕ್ಷಣವೇ ರೈತರಿಗೆ ಹಣ ಪಾವತಿಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ಭರವಸೆ ನೀಡಿದರು. ಇದಕ್ಕೆ ರೈತರು ಒಪ್ಪದ ಕಾರಣ ರೈತರು ಹಾಗೂ ಕಾರ್ಖಾನೆಯವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಕಬ್ಬು ಒಣಗುತ್ತಿರುವುದರಿಂದ ಕಾರ್ಖಾನೆ ಪ್ರಾರಂಭವಾಗಬೇಕು. ಜು.30ರೊಳಗೆ ರೈತರಿಗೆ ಕೊಡಬೇಕಾದ 50 ರೂ.ಗಳ ಹಣವನ್ನು ಕೊಡದಿದ್ದರೆ ಕಾರ್ಖಾನೆ ವಿರುದ್ಧ ಚಳವಳಿ ಮಾಡಲಾಗುವುದು ಎಂದು ರೈತ ಮುಖಂಡರು ತಿಳಿಸಿದ ನಂತರ ಕಾರ್ಖಾನೆ ಪ್ರಾರಂಭಿಸಲು ಅನುವು ಮಾಡಿಕೊಡಲಾಯಿತು.
ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಪ್ರಭುಲಿಂಗು, ವಿನೋದ್ ಬಾಬು, ರವಿ, ಕುದುರೆಗುಂಡಿ ನಾಗರಾಜ್, ಕಬ್ಬು ಬಳೆಗಾರರಾದ ತಮಯ್ಯ, ವೆಂಕಟರಾಮಣ್ಣ, ಕುಮಾರ, ರಾಮಣ್ಣ, ಜಗಣ್ಣ ಹಾಗೂ ಕಾರ್ಖಾನೆಯ ಮುಖ್ಯಸ್ಥರಾದ ರಾಮಚಂದ್ರರಾವ್, ಗೌರಿ ಪ್ರಕಾಶ್, ಚಂದ್ರಶೇಖರ್, ಮಹದೇವಪ್ಪ ಹಾಗೂ ಪಾಂಡು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net