ದೇಗುಲ ಅಭಿವೃದ್ಧಿಗೆ 5 ಲಕ್ಷ ರೂ.ದೇಣಿಗೆ

ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ಬೆಟ್ಟದ ಮೇಲಿರುವ ಹುತ್ತದ ತಿಮ್ಮಪ್ಪ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ನೆರವು ನೀಡಿದ ಹಿನ್ನೆಲೆಯಲ್ಲಿ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಅಭಿನಂದಿಸಲಾಯಿತು.  ಧನಂಜಯ್, ಗ್ರಾಮಸ್ಥರು, ಮುಖಂಡರು ಇದ್ದರು.

Published on
ಪಾಂಡವಪುರ: ತಾಲೂಕಿನ ಕೆರೆತೊಣ್ಣೂರು ಗ್ರಾಮದ ಬೆಟ್ಟದ ಮೇಲಿರುವ ಹುತ್ತದ ತಿಮ್ಮಪ್ಪ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಡಾ.ಎನ್.ಎಸ್.ಇಂದ್ರೇಶ್ ವೈಯಕ್ತಿಕವಾಗಿ 5 ಲಕ್ಷ ರೂ.ಹಣವನ್ನು ದೇಣಿಗೆ ನೀಡಿದರು.
ಬಳಿಕ ಮಾತನಾಡಿದ ಅವರು, ಐತಿಹಾಸಿಕ ಕೆರೆತೊಣ್ಣೂರು ಗ್ರಾಮದ ಕೆರೆಪಕ್ಕದ ಬೆಟ್ಟದ ಮೇಲಿರುವ ಐತಿಹಾಸಿಕ ಹುತ್ತದ ತಿಮ್ಮಪ್ಪ ದೇವಸ್ಥಾನವು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜತೆಗೂಡಿ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನನ್ನ ವೈಯಕ್ತಿಕವಾಗಿ 5 ಲಕ್ಷ ರೂ. ಹಣವನ್ನು ನೀಡಿದ್ದೇನೆ. ಗ್ರಾಮಸ್ಥರು ಜತೆಗೂಡಿ ದೇವಸ್ಥಾನ ಜೀರ್ಣೋದ್ಧಾರ ಮಾಡಿ, ಭಕ್ತರು, ದಾನಿಗಳು ನೀಡುವ ಹಣವನ್ನು ಸಂಗ್ರಹಿಸಿ ದೇವಸ್ಥಾನ ನಿರ್ಮಾಣ ಮಾಡಿ, ಅದು ಸಾಲದೆ ಇದ್ದರೆ ಮತ್ತಷ್ಟು ಸಹಕಾರ ನೀಡುತ್ತೇನೆ. ಗ್ರಾಮಸ್ಥರು ಆತಂಕಪಡುವುದು ಬೇಡ. ದೇವಸ್ಥಾನದ ನಿರ್ಮಾಣದ ಕೆಲಸ ಬರದಿಂದ ಸಾಗಲಿ ಎಂದು ಹಾರೈಸಿದರು.
ಇದೇ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ್, ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net