ಗುರು ಶಿಷ್ಯರ ಬಳಗದಿಂದ ಪೌರಕಾರ್ಮಿಕರಿಗೆ ಸನ್ಮಾನ

ಹಲಗೂರಿನಲ್ಲಿ ಗುರು ಶಿಷ್ಯರ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಬಳಗದ ಅಧ್ಯಕ್ಷ ಎ.ಎಸ್. ದೇವರಾಜು, ನಿವೃತ್ತ ಶಿಕ್ಷಕ ಭೈರವಯ್ಯ ಇತರರು ಇದ್ದರು.
ಹಲಗೂರಿನಲ್ಲಿ ಗುರು ಶಿಷ್ಯರ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಬಳಗದ ಅಧ್ಯಕ್ಷ ಎ.ಎಸ್. ದೇವರಾಜು, ನಿವೃತ್ತ ಶಿಕ್ಷಕ ಭೈರವಯ್ಯ ಇತರರು ಇದ್ದರು.
Published on
ಹಲಗೂರು: ಇಲ್ಲಿನ ಗುರು ಶಿಷ್ಯರ ಬಳಗದ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಹಲಗೂರು ಗ್ರಾಮ ಪಂಚಾಯತಿಯ ಪೌರಕಾರ್ಮಿಕರಾದ ಭದ್ರಸ್ವಾಮಿ , ರಮೇಶ, ಮಹಾದೇವಮೂರ್ತಿ, ಪ್ರದೀಪ, ರೇಣುಕಮ್ಮ, ಸವಿತಾ, ಪಾರ್ವತಮ್ಮ, ಲಕ್ಷ್ಮಣ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೌರ ಕಾರ್ಮಿಕರಾದ ಪಾರ್ವತಮ್ಮ ಮಾತನಾಡಿ, ಗುರು-ಶಿಷ್ಯರ ಬಳಗದವರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಆಭಾರಿಯಾಗಿರುತ್ತೇವೆ ಎಂದರು.
ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್. ದೇವರಾಜು ಮಾತನಾಡಿ, ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಗ್ರಾಮವನ್ನು ಸ್ವಚ್ಛ ಮಾಡುವ ಸಿಬ್ಬಂದಿಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಲಿ ಎಂದರು.
8 ಜನ ಕಾರ್ಮಿಕರಿಗೆ ಸನ್ಮಾನಿಸಿರುವುದು ಖುಷಿ ತಂದಿದೆ. ಗ್ರಾಮದ ಸ್ವಚ್ಛತೆ ಬಹು ಮುಖ್ಯ. ಇದು ಕಷ್ಟದ ಕೆಲಸ.
ಅದನ್ನು ದಿನವೂ ಬೇಸರ ಇಲ್ಲದಂತೆ ಮಾಡುವುದು ಪೌರ ಕಾರ್ಮಿಕರ ದೊಡ್ಡ ಗುಣ ಎಂದರು.
ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೆ ಯಾವುದಾದರೂ ಸಮಾಜಸೇವೆ ಮಾಡಬೇಕು ಎಂದು ಸಂಕಲ್ಪ ಮಾಡಿದೆ. ನಮ್ಮ ಶಿಷ್ಯರೊಂದಿಗೆ ಸೇರಿಕೊಂಡು ಕಳೆದ 6 ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಧನ್ಯತೆ ಮೂಡಿದೆ ಎಂದರು. ಸಮಾಜದಲ್ಲಿ ಕಟ್ಟ ಕಡೆಯ ಹಂತದಲ್ಲಿರುವವರಿಗೆ ಸಹಾಯ ಮಾಡಿದರೆ ದೇವರು ಮೆಚ್ಚುತ್ತಾನೆ. ಸಹಾಯಬೇಡಿ ಬಂದವರಿಗೆ ನೆರವಾಗಬೇಕು. ಹಾಗಾಗಿ ಕಳೆದ ವರ್ಷದಿಂದ ಪೌರಕಾರ್ಮಿಕರನ್ನು ಗೌರವಿಸಲು ಮುಂದಾಗಿದ್ದೇವೆ. ಇದಕ್ಕೆ ಎಲ್ಲರ ಮೆಚ್ಚುಗೆ ದೊರೆತಿದೆ ಎಂದರು. ನಿವೃತ್ತ ಶಿಕ್ಷಕ ಭೈರವಯ್ಯ ಇತರರು ಇದ್ದರು.
( 1ಡಿ1 )
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net