15 ರಂದು ಆರೋಗ್ಯ ತಪಾಸಣೆ ಉಚಿತ ಶಿಬಿರ

ಮದ್ದೂರು ನಗರದ ಮದ್ದೂರು ಕ್ರೀಡಾ ಬಳಗದ ನಡೆದ ಸಭೆಯಲ್ಲಿ ಮದ್ದೂರು ಕ್ರೀಡಾ ಬಳಗದ ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿದರು. ರಾಮಕೃಷ್ಣೇ ಗೌಡ, ಎಂ.ಬಿ.ಯೋಗ, ಸಿದ್ದಯ್ಯ, ಕೆ.ಶಿವಕುಮಾರ್, ಎಸ್.ಬಿ.ನಾಗರಾಜು, ಟಿ.ಎನ್.ಶಿವಲಿಂಗೇಗೌಡ, ಕೆಂಗಲ್‌ಗೌಡ ಇದ್ದರು.
ಮದ್ದೂರು ನಗರದ ಮದ್ದೂರು ಕ್ರೀಡಾ ಬಳಗದ ನಡೆದ ಸಭೆಯಲ್ಲಿ ಮದ್ದೂರು ಕ್ರೀಡಾ ಬಳಗದ ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿದರು. ರಾಮಕೃಷ್ಣೇ ಗೌಡ, ಎಂ.ಬಿ.ಯೋಗ, ಸಿದ್ದಯ್ಯ, ಕೆ.ಶಿವಕುಮಾರ್, ಎಸ್.ಬಿ.ನಾಗರಾಜು, ಟಿ.ಎನ್.ಶಿವಲಿಂಗೇಗೌಡ, ಕೆಂಗಲ್‌ಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಂತ ತಪಾಸಣೆ ಹಾಗೂ ರಕ್ತದಾನ ಶಿಬಿರ
  • ಬೃಹತ್ ಆರೋಗ್ಯ ಉಚಿತ ತಪಾಸಣೆ
ಮದ್ದೂರು : ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯ ಆವರಣದಲ್ಲಿ ಮಾ.15 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೃಹತ್ ಆರೋಗ್ಯ ಉಚಿತ ತಪಾಸಣೆ, ದಂತ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮದ್ದೂರು ಕ್ರೀಡಾ ಬಳಗದ ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ ತಿಳಿಸಿದರು.
ನಗರದ ಮದ್ದೂರು ಕ್ರೀಡಾ ಬಳಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಮದ್ದೂರು ಲಯನ್ಸ್, ಮದ್ದೂರು ಕಂದಬ ಲಯನ್ಸ್ ಸಂಸ್ಥೆ, ಮಾನಸ ಎಜುಕೇಷನ್ ಟ್ರಸ್ಟ್, ಮದ್ದೂರು ಕ್ರೀಡಾ ಬಳಗದ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಒಕ್ಕಲಿಗರ ಸಂಘ, ದಂತ ವೈದ್ಯಕೀಯ ಮಹಾ ವಿದ್ಯಾಲಯ ಬೆಂಗಳೂರು ವತಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ನುರಿತ ವೈದ್ಯರು ತಪಾಸಣೆ ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಅನುಕೂಲ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮದ್ದೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಮಕೃಷ್ಣೇಗೌಡ, ಕಾರ್ಯದರ್ಶಿ ಎಂ.ಬಿ.ಯೋಗ, ಖಜಾಂಚಿ ಸಿದ್ದಯ್ಯ, ಮದ್ದೂರು ಕದಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಶಿವಕುಮಾರ್, ಕಾರ್ಯದರ್ಶಿ ಎಸ್.ಬಿ.ನಾಗರಾಜು, ಖಜಾಂಚಿ ಟಿ.ಎನ್.ಶಿವಲಿಂಗೇಗೌಡ, ಸಮಾಜ ಸೇವಕ ಕೆಂಗಲ್‌ಗೌಡ, ಮಾನಸ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಪಿ.ನಾಗರಾಜು, ದಿನೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net