ಯಾತ್ರೆಗೆ ತೆರಳಿದ ಮಾಲಾಧಾರಿಗಳು

ಪಾಂಡವಪುರ ಪಟ್ಟಣದಿಂದ ನೂರಾರು ಹನುಮ ಮಾಲಾಧಾರಿಗಳು ಬೈಕ್ ರ‌್ಯಾಲಿ  ಮೂಲಕ ತೆರಳಿದರು.
ಪಾಂಡವಪುರ ಪಟ್ಟಣದಿಂದ ನೂರಾರು ಹನುಮ ಮಾಲಾಧಾರಿಗಳು ಬೈಕ್ ರ‌್ಯಾಲಿ ಮೂಲಕ ತೆರಳಿದರು.
Published on
ಪಾಂಡವಪುರ: ಹನುಮದ್ ವ್ರತ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಹಾಗೂ ಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಪಾಂಡವಪುರ ಪಟ್ಟಣದಿಂದ ನೂರಾರು ಹನುಮ ಮಾಲಾಧಾರಿಗಳು ಬೈಕ್ ರ‌್ಯಾಲಿ ಮೂಲಕ ತೆರಳಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಪಟ್ಟಣದ ಐದು ದೀಪದ ವೃತ್ತದಿಂದ ಆರಂಭವಾದ ಬೈಕ್ ರ‌್ಯಾಲಿ ಹರಳಹಳ್ಳಿ, ಕೆನ್ನಾಳು, ರೈಲ್ವೆ ನಿಲ್ದಾಣ, ದರಸಗುಪ್ಪೆ, ಕಿರಂಗೂರು, ಕರಿಘಟ್ಟ, ಗಂಜಾಂನ ಶ್ರೀ ನಿಮಿಷಾಂಬ ಮಾರ್ಗವಾಗಿ ಸಂಚರಿಸಿ ಶ್ರೀರಂಗಪಟ್ಟಣಕ್ಕೆ ತಲುಪಿತು.
ಹನುಮ ಮಾಲಾಧಾರಿಗಳು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಈ ವೇಳೆ ವ್ಯಕ್ತಿಯೊಬ್ಬರು ಗದೆ ಹಿಡಿದು ಗಮನಸೆಳೆದರು. ಬಿಜೆಪಿ ಅಧ್ಯಕ್ಷ ನೀಲನಹಳ್ಳಿ ಧನಂಜಯ, ಮಾಜಿ ಅಧ್ಯಕ್ಷ ಎಲ್.ಅಶೋಕ್, ಮುಖಂಡರಾದ ಎಚ್.ಎನ್.ಮಂಜುನಾಥ್, ಹಿರೇಮರಳಿ ಶೀನಪ್ಪ, ರಾಧಕೃಷ್ಣ, ವಿ.ಸಿ.ಕಾಲನಿ ಶ್ರೀನಿವಾಸ್ ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಯಾತ್ರೆ ತೆರಳುವ ಮಾರ್ಗದ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net