ಶ್ರೀರಂಗಪಟ್ಟಣ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಕಳುವಾಗಿದ್ದ ಸುಮಾರು 1.63 ಲಕ್ಷ ಬೆಲೆಯ ಹತ್ತಕ್ಕೂ ಹೆಚ್ಚು ಮೊಬೈಲ್ ಗಳನ್ನು ಪೊಲೀಸರು ಪತ್ತೆ ಹಚ್ಚಿ,ಮಾಲೀಕರಿಗೆ ಹಿಂದಿರುಗಿಸಿದರು.
ಟೌನ್ ಠಾಣೆ ಇನ್ ಸ್ಪೆೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಪೊಲೀಸ್ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಪಿಎಸೈಗಳಾದ ಜಾನಾಬಾಯಿ, ಗಂಗಾಧರ್ ಹಾಗೂ ಸಿಬ್ಬಂದಿ ಚಂದ್ರು, ಅಭಿ,ಮಂಜು ಇತರರಿದ್ದರು.