ಶ್ರೀ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ

ಶುಕ್ರವಾರ ನಡೆದ ಮಹಾಭಿಷೇಕದ ವೇಳೆ ಅರಿಶಿಣ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಚೆಲುವನಾರಾಯಣಸ್ವಾಮಿ.
ಶುಕ್ರವಾರ ನಡೆದ ಮಹಾಭಿಷೇಕದ ವೇಳೆ ಅರಿಶಿಣ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಚೆಲುವನಾರಾಯಣಸ್ವಾಮಿ.
Published on
ಮೇಲುಕೋಟೆ: ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ನಕ್ಷತ್ರದ ಆಷಾಢ ದ್ವಿತೀಯ ದಿನವಾದ ಶುಕ್ರವಾರ ಶ್ರೀ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರಿತು.
ತುಂತುರು ಮಳೆಯ ನಡುವೆ ಮಹಾಭಿಷೇಕಕ್ಕೆ ಚಾಲನೆ ನೀಡಲಾಯಿತು. ದ್ವಾದಶಾರಾಧನೆ, ವೇದ ಪಾರಾಯಣದೊಂದಿಗೆ ಹಾಲು, ಮೊಸರು, ಜೇನು, ಎಳನೀರು ಮುಂತಾದ ಮಂಗಳ ದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಅಭಿಷೇಕದ ನಡುವೆ ಅರಿಶಿಣ ಅಲಂಕಾರದಲ್ಲಿದ್ದ ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು.
ಪಾತಾಳಾಂಕಣದಲ್ಲಿ ನಾಲ್ವರು ರಾಣಿಯರೊಂದಿಗೆ ಪ್ರತಿಷ್ಠಾಪಿತವಾಗಿರುವ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ್ ಭಕ್ತ ವಿಗ್ರಹಕ್ಕೆ ಶುಕ್ರವಾರ ಸಂಜೆ ಸ್ವಾಮಿಯ ಪಾದುಕಾ ಸಮೇತವಾದ ಶೇಷ ವಸ್ತ್ರಮಾಲೆ ಮರ್ಯಾದೆಯನ್ನು ಅರ್ಪಿಸಲಾಯಿತು. ವಿಶ್ವಕ್ಷೇನರ ತಿರುವೀದಿ ಉತ್ಸವದ ನಂತರ ಕಲ್ಯಾಣೋತ್ಸವ ಕಾರ್ಯಕ್ರಮಗಳು ಆರಂಭಗೊಂಡವು. ರಾತ್ರಿ ಅಮ್ಮನವರ ಸನ್ನಿಧಿಯ ಆವರಣದಲ್ಲಿ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಸ್ವಾಮಿಗೆ ಸಮನ್ಮಾಲೆ ಲಾಜಹೋಮದೊಂದಿಗೆ ಕಲ್ಯಾಣೋತ್ಸವ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net