

ಮೇಲುಕೋಟೆ :
ಮೇಲುಕೋಟೆಯಲ್ಲಿ 150 ವರ್ಷ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಪದ್ಮಶ್ರೀ ಪುರಸ್ಕೃತ ಕವಿ ಪು.ತಿ.ನ ವ್ಯಾಸಂಗ ಮಾಡಿದ 150 ವಸಂತ ಪೂರೈಸಿರುವ ಶತಮಾನದ ಸರ್ಕಾರಿ ಶಾಲೆಯನ್ನು ತಕ್ಷಣ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಪರಿವರ್ತಿಸಿ ಆದೇಶ ನೀಡಬೇಕು ಎಂದು ಚೆಲುವನಾರಾಯಣಸ್ವಾಮಿ ದೇವಾಲಯದ ಆಡಳಿತ ಸಮಿತಿ ಸದಸ್ಯ ವಿ.ವೆಂಕಟರಾಮೇಗೌಡ ಮನವಿ ಮಾಡಿದರು.