ಹಾಲು ವಿತರಕರಿಗೆ ಮೊದಲು ಬೋನಸ್ ನೀಡಿ

ಕಿಕ್ಕೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು. ವಾಸುದೇವ, ರಮೇಶ್, ಪುಟ್ಟಣ್ಣಯ್ಯ, ಮೋಹನ್, ಪರಮೇಶ್ ಇತರರಿದ್ದರು.
ಕಿಕ್ಕೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು. ವಾಸುದೇವ, ರಮೇಶ್, ಪುಟ್ಟಣ್ಣಯ್ಯ, ಮೋಹನ್, ಪರಮೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಭೆಯಲ್ಲಿ ಒತ್ತಾಯಿಸಿದ ರೈತರು
ಕಿಕ್ಕೇರಿ: ಸಂಘದಲ್ಲಿ ಸಮಸ್ಯೆಗಳು ನೂರಾರು ಇದೆ. ಆದರೆ, ಮೊದಲು ಹಾಲು ವಿತರಕರಿಗೆ ಬೋನಸ್ ನೀಡಿ ಎಂದು ಹಾಲು ವಿತರಕರು ಒತ್ತಾಯಿಸಿದರು.
ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಡೇರಿ ಅಧ್ಯಕ್ಷ ವಾಸುದೇವ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಹಾಲು ವಿತರಕರು ಒತ್ತಾಯಿಸಿದರು.
ಹೈನುಗಾರಿಕೆ ನಂಬಿ ಬದುಕುತ್ತಿದ್ದೇವೆ. ಸಂಘದ ಅಭಿವೃದ್ಧಿಗೆ ಷೇರುದಾರರ ಸಹಕಾರ ಸಾಕಷ್ಟಿದೆ ಎಂಬುದನ್ನು ಮರೆಯಬಾರದು. ತ್ವರಿತವಾಗಿ ಸಂಘದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಂಘ ಹಾಗೂ ಷೇರುದಾರರ ಅಭಿವೃದ್ಧಿಗೆ ಮುಂದಾಗಿ ಎಂದು ಒತ್ತಾಯಿಸಿದರು.
ಡೇರಿ ಅಧ್ಯಕ್ಷ ವಾಸುದೇವ ಮಾತನಾಡಿ, ಹಿಂದೆ ಇದ್ದ ಕಾರ್ಯದರ್ಶಿ ಸಂಘದಲ್ಲಿನ ದಾಖಲೆ ಪುಸ್ತಕಗಳನ್ನು ನೀಡಿಲ್ಲ. ಪರಿಣಾಮ ಆಡಿಟ್ ಮಾಡಿಸಲು ಸಮಸ್ಯೆಯಾಗಿದೆ. ಶೀಘ್ರದಲ್ಲೇ ಆಡಿಟ್ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. ಸಂಘದಲ್ಲಿ ಸುಮಾರು 340 ಷೇರುದಾರರಿದ್ದಾರೆ. ಪ್ರಸ್ತುತ ಒಟ್ಟು 68 ಲಕ್ಷ ರೂ. ಆದಾಯವಿದೆ. ಇದರಲ್ಲಿನ ಶೇ.65ರಷ್ಟು ಹಣವನ್ನು ಬೋನಸ್ ಅಥವಾ ಬಹುಮಾನ ವಿತರಣೆಗೆ ಸದ್ಬಳಕೆ ಮಾಡಿಕೊಳ್ಳಲಾಗುವುದು. ಆದರಿಂದ ಹಾಲು ವಿತರಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಷೇರುದಾರ ತಾರಾನಾಥ ಮಾತನಾಡಿ, ಸಂಘ ಸ್ಥಾಪನೆ ವೇಳೆ 10 ರೂ. ಇದ್ದ ಷೇರು ಈಗ 1175 ರೂ.ಗಳಾಗಿದೆ. ಉಳಿಕೆ ಹಣವನ್ನು ಆರಂಭದ ಷೇರುದಾರರಿಂದ ಕಟ್ಟಿಸಿಕೊಳ್ಳಿ. 10 ರೂ. ಷೇರು ಹಣ ನೀಡಿದವರು ಮೃತರಾದರೆ ಸಂಘದ ಸಾಧಕ-ಬಾಧಕ ಚರ್ಚಿಸಿ ಕನಿಷ್ಠ 2 ಸಾವಿರ ರೂ. ನೀಡಿ ಹಾಗೂ 1175 ರೂ. ನೀಡಿದ ಷೇರುದಾರರು ಮೃತರಾದರೆ 10 ಸಾವಿರ ರೂ. ಕುಟುಂಬದವರಿಗೆ ನೀಡಲು ಸಂಘ ಮುಂದಾಗಬೇಕು ಎಂದು ಮನವಿ ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿಗಳು ಸಭೆಗೆ ಹಾಜರಾಗದಿರುವುದಕ್ಕೆ ಷೇರುದಾರರು ಅಸಮಾಧಾನ ವ್ಯಕ್ತಪಡಿಸಿದರು. ನಿರ್ದೇಶಕರಾದ ಪುಟ್ಟಣ್ಣಯ್ಯ, ಮೋಹನ್, ಕೆ.ಟಿ.ರಮೇಶ್, ಪರಮೇಶ್, ಮಂಜೇಗೌಡ, ನಾಗರಾಜಶೆಟ್ಟಿ, ಮೀನಾಕ್ಷಿ, ಹೇಮಾ, ಪಲ್ಲವಿ, ಪೂರ್ಣಿಮಾ, ಹಾಲು ವಿತರಕರು ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net