ನಗರಸಭೆ ಕಂದಾಯ ನಿಗದಿಗೆ ವಿರೋಧ

ಮದ್ದೂರು ನಗರಸಭೆಯ ಕಂದಾಯ ನಿಗದಿ ವಿರೋಧಿಸಿ ಗೆಜ್ಜಲಗೆರೆಯ ಗ್ರಾಮಸ್ಥರು ನಗರದ ನಗರಸಭೆ ಕಚೇರಿ ಮುಂದೆ ಕಂದಾಯ ನಿಗದಿ ಕರಪತ್ರಗಳನ್ನು ಸುಟ್ಟು ಕರ ನಿರಾಕರಣೆ ಚಳವಳಿ ನಡೆಸಿದರು. ಸುನಂದಾ ಜಯರಾಮು, ಲಿಂಗಪ್ಪಾಜಿ, ಜಿ.ಎ.ಶಂಕರ್, ಆತ್ಮಾನಂದ, ಹೊನ್ನಪ್ಪ ಇತರರು ಹಾಜರಿದ್ದರು.
ಮದ್ದೂರು ನಗರಸಭೆಯ ಕಂದಾಯ ನಿಗದಿ ವಿರೋಧಿಸಿ ಗೆಜ್ಜಲಗೆರೆಯ ಗ್ರಾಮಸ್ಥರು ನಗರದ ನಗರಸಭೆ ಕಚೇರಿ ಮುಂದೆ ಕಂದಾಯ ನಿಗದಿ ಕರಪತ್ರಗಳನ್ನು ಸುಟ್ಟು ಕರ ನಿರಾಕರಣೆ ಚಳವಳಿ ನಡೆಸಿದರು. ಸುನಂದಾ ಜಯರಾಮು, ಲಿಂಗಪ್ಪಾಜಿ, ಜಿ.ಎ.ಶಂಕರ್, ಆತ್ಮಾನಂದ, ಹೊನ್ನಪ್ಪ ಇತರರು ಹಾಜರಿದ್ದರು.
Published on
ಮದ್ದೂರು: ನಗರಸಭೆಯ ಕಂದಾಯ ನಿಗದಿ ವಿರೋಧಿಸಿ ಗೆಜ್ಜಲಗೆರೆಯ ಗ್ರಾಮಸ್ಥರು ನಗರದ ನಗರಸಭೆ ಕಚೇರಿ ಮುಂದೆ ಸೋಮವಾರ ಕಂದಾಯ ನಿಗದಿ ಕರಪತ್ರಗಳನ್ನು ಸುಟ್ಟು ಕರ ನಿರಾಕರಣೆ ಚಳವಳಿ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮು ಮಾತನಾಡಿ, ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವುದರ ವಿರುದ್ಧ ನಾವು 100ಕ್ಕೂ ಹೆಚ್ಚು ದಿನಗಳಿಂದ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದೇವೆ. ಅಷ್ಟೇ ಅಲ್ಲದೆ ಈ ವಿಷಯ ನ್ಯಾಯಾಲಯಲ್ಲಿದ್ದರೂ ಮದ್ದೂರು ನಗರಸಭೆಯಿಂದ ನಮ್ಮ ಗ್ರಾಮವನ್ನು ಒಳಪಟ್ಟಂತೆ ಹೊರಡಿಸಿರುವ ಕರ ವಸೂಲಾತಿಯ ಕ್ರಮವನ್ನು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಖಂಡಿಸುವುದರ ಮೂಲಕ ನಗರಸಭೆಯ ಕಚೇರಿ ಮುಂದೆ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದರು.
ಯಾವುದೇ ರೀತಿಯ ಕರ ವಸೂಲಾತಿಗಾಗಿ ನಗರಸಭೆಯ ಸಿಬ್ಬಂದಿ ಗೆಜ್ಜಲಗೆರೆ ಗ್ರಾಮಕ್ಕೆ ಬರುವಂತಿಲ್ಲ. ನಗರಸಭೆಗೆ ಗೆಜ್ಜಲಗೆರೆ ಗ್ರಾಮಸ್ಥರು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸೂಚನಾ ಫಲಕವನ್ನು ಕೂಡ ಅಳವಡಿಸಲಾಗುವುದು, ಈ ಮೂಲಕ ನಗರಸಭೆಯ ಸಿಬ್ಬಂದಿಗೆ ಗ್ರಾಮದೊಳಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದರು.
ಕಾನೂನು ಬಾಹಿರವಾಗಿ ನಗರಸಭೆಯಿಂದ ಹೊರಡಿಸಿರುವ ಕರ ನಿಗದಿ ಕ್ರಮವನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಾಪಸ್ ಪಡೆಯಬೇಕು ಹಾಗೂ ಗೆಜ್ಜಲಗೆರೆ ಗ್ರಾಮವನ್ನು ಗ್ರಾಮವನ್ನಾಗಿಯೇ ಉಳಿಸಬೇಕು ನಗರಸಭೆಗೆ ಸೇರಿಸಬಾರದು ಎಂದು ಆಗ್ರಹಿಸಿದರು.
ನಗರಸಭೆಯ ಕಚೇರಿ ವ್ಯವಸ್ಥಾಪಕ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲಿಂಗಾಪ್ಪಾಜಿ, ಜಿ.ಎ.ಶಂಕರ್, ಮುಖಂಡರಾದ ಆತ್ಮಾನಂದ, ಲೋಕೇಶ್, ಶಾಂತಮ್ಮ, ಹೊನ್ನಮ್ಮ, ಪ್ರಭಾವತಿ, ಶಿವನಂಜು, ಪುಟ್ಟಸ್ವಾಮಿ, ಚಂದ್ರಶೇಖರ್, ಮಾಜಿ ಯೋಧ ಹೊನ್ನಪ್ಪ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net