ಗೇಟ್‌ಗಳ ನಿರ್ವಹಣಾ ಕಾರ್ಯ ಆರಂಭ

ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೌಕರರು  +80 ಮಟ್ಟದ ಗೇಟುಗಳ ಪರಿಶೀಲನೆ,  ಗ್ರೀಸ್ ಮತ್ತು ಆಯಿಲಿಂಗ್  ಮಾಡುತ್ತಿದ್ದ ಸಂದರ್ಭ.
ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೌಕರರು +80 ಮಟ್ಟದ ಗೇಟುಗಳ ಪರಿಶೀಲನೆ, ಗ್ರೀಸ್ ಮತ್ತು ಆಯಿಲಿಂಗ್ ಮಾಡುತ್ತಿದ್ದ ಸಂದರ್ಭ.
Published on
ಕೆ.ಆರ್.ಸಾಗರ: ಮುಂಗಾರು ಮಳೆ ಹಿನ್ನೆಲೆಯಲ್ಲಿ ಕೃಷ್ಙರಾಜಸಾಗರ ಅಣೆಕಟ್ಟೆ ಒಳಹರಿವು ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಮಟ್ಟದ ಗೇಟ್‌ಗಳಿಗೆ ಗ್ರೀಸ್ ಮತ್ತು ಆಯಿಲಿಂಗ್ ಕಾರ್ಯ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಭರದಿಂದ ಸಾಗುತ್ತಿದೆ.
ಗೇಟುಗಳ ನಿರ್ವಹಣೆ ಕಾರ್ಯ ಪರಿಶೀಲಿಸಿದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಇಇ ವೆಂಕಟರಮಣಪ್ಪ, ಎಇಇ ಘಾರೂಕು ಅಭು ಹಲವು ಸಲಹೆ ಸೂಚನೆ ನೀಡಿದರು.
ಪ್ರತಿವರ್ಷ ಕೂಡ ಗೇಟುಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿ, ದೋಷವಿದ್ದರೆ ದುರಸ್ತಿಪಡಿಸಲಾಗುತ್ತದೆ. ಪುಲ್ಲಿಗಳು, ಗೇಟ್‌ಗಳು ಮತ್ತು ಅದರ ಯಂತ್ರಗಳಿಗೆ ಗ್ರೀಸ್ ಮತ್ತು ಆಯಿಲಿಂಗ್ ಹಾಕಲಾಗುತ್ತದೆ. ಅದರಂತೆ ಈ ವರ್ಷವೂ ಕೂಡ ಗೇಟ್‌ಗಳ ನಿರ್ವಹಣೆ ಕೆಲಸ ಕೆಲಸ ಮಾಡಲಾಗುತ್ತಿದೆ ಎಂದರು.
ಈ ವರ್ಷ ಕೂಡ +60 , +80, +103 ಸೇರಿದಂತೆ ವಿವಿಧ ಮಟ್ಟದ ಗೇಟುಗಳು ಮತ್ತು ವಿ.ಸಿ.ನಾಲೆಯ ಗೇಟುಗಳಿಗೆ ಗ್ರೀಸ್ ಮತ್ತು ಆಯಿಲಿಂಗ್ ಕಾರ್ಯ ನಡೆಯುತ್ತಿದ್ದು, ಎರಡು ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಕಳೆದ ವರ್ಷದಲ್ಲಿ ಸುಮಾರು 90 ವರ್ಷಗಳ ಹಳೆಯದಾದ ವಿವಿಧ ಮಟ್ಟದ 136 ಗೇಟುಗಳನ್ನು ಸಂಪೂರ್ಣ ಬದಲಾವಣೆ ಮಾಡಿದ್ದು, ಈಗ ಮೋಟಾರ್ ಮೂಲಕ ಗೇಟುಗಳನ್ನು ತೆಗೆದು ನೀರನ್ನು ಅಣೆಕಟ್ಟೆಯಿಂದ ಹೊರಬಿಡ ಬಹುದಾಗಿದೆ. ಈ ಅಣೆಕಟ್ಟೆಯಲ್ಲಿನ 152 ಗೇಟುಗಳು ಸ್ಕಾಡ ಟೆಕ್ನಾಲಜಿಯಲ್ಲಿ ನಿಯಂತ್ರಣ ಮಾಡಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net