ಜೂಜಾಡುತ್ತಿದ್ದವರ ಬಂಧನ

ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಜೂಜುಕೋರರನ್ನು ಗುರುವಾರ ಬಂಧಿಸಿದ ಹಲಗೂರು ಪೊಲೀಸರು, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಜೂಜುಕೋರರನ್ನು ಗುರುವಾರ ಬಂಧಿಸಿದ ಹಲಗೂರು ಪೊಲೀಸರು, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
Published on
ಹಲಗೂರು: ವಿವಿಧ ಕಡೆ ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಜೂಜುಕೋರರನ್ನು ಗುರುವಾರ ಬಂಧಿಸಿದ ಹಲಗೂರು ಪೊಲೀಸರು, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಹಲಗೂರು ಸಮೀಪದ ಧನಗೂರು ಕುರಿಫಾರಂ ಗ್ರಾಮದ ಹೊರ ವಲಯದಲ್ಲಿರುವ ರೇಷ್ಮೆ ಸಾಕಣೆ ಮನೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಿ 12 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಸಮೀಪದ ವಿ.ಬಸಾಪುರದಲ್ಲಿ ಜೂಜಾಟದಲ್ಲಿ ತೊಡಗಿದ್ದ 3 ಮಂದಿ ಜೂಜುಕೋರರನ್ನು ಬಂಧಿಸಿದ್ದು, ಆರೋಪಿಗಳಿಂದ 19 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಹಲಗೂರಿನ ವಾಜರಗೇರಿ ಕೇಶವಮೂರ್ತಿ ಅವರ ಮನೆಯ ಟೇರೆಸ್ ಮೇಲೆ ಜೂಜಾಟದಲ್ಲಿ ತೊಡಗಿದ್ದ 10 ಜೂಜುಕೋರರನ್ನು ಬಂಧಿಸಿದ್ದು, 9 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.
ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿ ಅಧರಿಸಿದ ಹಲಗೂರು ಪಿಎಸ್‌ಐ ಲೋಕೇಶ್, ಸಿಬ್ಬಂದಿ ದಾಳಿ ಮಾಡಿದ್ದು, ಜೂಜುಕೋರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net