ಜ್ಞಾನದಾಹಿಯಾದರೆ ಜೀವನದಲ್ಲಿ ಉನ್ನತ ಸಾಧನೆ

ಮದ್ದೂರು ನಗರದ ಶಿವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕೃಷಿಕ್ ಅಲಯನ್ಸ್ ಕ್ಲಬ್, ಸಕ್ಕರೆ ನಾಡು ಅಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕೆ.ಟಿ.ಹನುಮಂತು, ಕೆ.ಎಸ್.ಚಂದ್ರಶೇಖರ್, ಎಸ್.ಎಸ್.ಕೃಷ್ಣಪ್ಪ, ನಾಗರಾಜು, ಧನಂಜಯ, ಲೋಕೇಶ್, ಆನಂದ್ ಇದ್ದರು.
ಮದ್ದೂರು ನಗರದ ಶಿವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕೃಷಿಕ್ ಅಲಯನ್ಸ್ ಕ್ಲಬ್, ಸಕ್ಕರೆ ನಾಡು ಅಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕೆ.ಟಿ.ಹನುಮಂತು, ಕೆ.ಎಸ್.ಚಂದ್ರಶೇಖರ್, ಎಸ್.ಎಸ್.ಕೃಷ್ಣಪ್ಪ, ನಾಗರಾಜು, ಧನಂಜಯ, ಲೋಕೇಶ್, ಆನಂದ್ ಇದ್ದರು.
Published on
ಮದ್ದೂರು: ವಿದ್ಯಾರ್ಥಿಗಳು ಜ್ಞಾನದಾಹಿಯಾದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಿ, ಪಾಲಕರು ಹಾಗೂ ಶಿಕ್ಷಕರಿಗೆ ಕೀರ್ತಿ ತರಬಹುದೆಂದು ಸೌತ್ ಮಲ್ಟಿಪಲ್ ಅಂತಾರಾಷ್ಟ್ರೀಯ ಅಲಯನ್ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು ಕಿವಿಮಾತು ಹೇಳಿದರು.
ನಗರದ ಶಿವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಮಂಗಳವಾರ ಕೃಷಿಕ್ ಅಲಯನ್ಸ್ ಕ್ಲಬ್, ಸಕ್ಕರೆ ನಾಡು ಅಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಗಳ ಸಬಲೀಕರಣದಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನ ವಿತರಿಸಿ ಮಾತನಾಡಿದರು.
ಶಿಕ್ಷಣ ಸಾಗರದಂತೆ ವಿಸ್ತಾರವಾಗಿದ್ದು, ನಿರಂತರ ಅಭ್ಯಾಸ, ಕಠಿಣ ಶ್ರಮದಿಂದ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು. ಇಲ್ಲದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣದ ಜತೆಗೆ ಸರ್ಕಾರ ಉಚಿತ ಶಿಕ್ಷಣ, ಪಾಲಕರಿಗೆ ಹೊರೆಯಾಗದಂತೆ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಜತೆಗೆ ಸಂಘ, ಸಂಸ್ಥೆಗಳು ಉಚಿತ ನೋಟ್‌ಬುಕ್, ಲೇಖನಿ ಸಾಮಾಗ್ರಿಗಳನ್ನು ನೀಡುತ್ತಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಲವಾರು ಮಹನೀಯರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು ಎಂದು ಮನವಿ ಮಾಡಿದರು.
ಅಂತಾರಾಷ್ಟ್ರೀಯ ಅಲಯನ್ ಸಂಸ್ಥೆ ಪ್ರತಿ ವರ್ಷ ನೂರಾರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದೆ. ಸರ್ಕಾರಿ ಶಾಲೆಗಳು ಉಳಿಯಲು ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಅಲಯನ್ಸ್ ಕ್ಲಬ್‌ನ ಒಂದನೇ ಜಿಲ್ಲಾ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಜಿಲ್ಲಾಧ್ಯಕ್ಷ ಎಚ್.ಜೆ.ಸುರೇಶ್, ವಲಯಾಧ್ಯಕ್ಷ ಎಸ್.ಎಸ್.ಕೃಷ್ಣಪ್ಪ, ನಾಗರಾಜು, ಧನಂಜಯ, ಮುಖ್ಯ ಶಿಕ್ಷಕ ಲೋಕೇಶ್, ಸಹ ಶಿಕ್ಷಕರಾದ ಎಚ್.ಕೆ.ಆನಂದ್, ಮುರಳಿ, ರಾಜೀವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net