ಮದ್ದೂರು ರೋಟರಿ ಸಂಸ್ಥೆ ಹಾಗೂ ಬೆಂಗಳೂರು ರೋಟರಿ ಜಂಕ್ಷನ್ ಕ್ಲಬ್ ವತಿಯಿಂದ ವಳಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಲಾಯಿತು. ಎಸ್.ಪಿ.ಶ್ರೀನಿವಾಸ್ ಬಿಂದಾಸ್, ಮನೀಶ್, ಅನುಜ್, ಶಿವಪ್ಪ, ಪ್ರಕಾಶ್, ಮಹೇಶ್, ಲೋಕೇಶ್, ಮಧು ಇದ್ದರು.
ಮದ್ದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮದ್ದೂರು ರೋಟರಿ ಸಂಸ್ಥೆ ಹಾಗೂ ಬೆಂಗಳೂರು ರೋಟರಿ ಜಂಕ್ಷನ್ ಕ್ಲಬ್ ವತಿಯಿಂದ ವಳಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಯಿತು.
ಸೈಕಲ್ ವಿತರಣೆ ಜತೆಗೆ ಶಾಲಾ ಆವರಣದಲ್ಲಿ ಗಿಡಗಳಿಗೆ ನೀರುಣಿಸುವುದರ ಮೂಲಕ ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು. ರೋಟರಿ ಸಂಸ್ಥೆಯ ಕಾರ್ಯಕ್ರಮಕ್ಕೆ ಶಾಲಾ ಮಂಡಳಿ ಹಾಗೂ ಪಾಲಕರಿಂದ ಪ್ರಶಂಸೆ ವ್ಯಕ್ತವಾಯಿತು.
ಮದ್ದೂರು ರೋಟರಿ ಸಂಸ್ಥೆ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಬಿಂದಾಸ್ ಮಾತನಾಡಿ, ರೋಟರಿ ಸಂಸ್ಥೆಯ ಮೂಲ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವುದು. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಯಂತ್ರೋಪಕರಣಗಳ ನೆರವು, ಸಾರ್ವಜನಿಕರಿಗೆ ಮೂಲಸೌಕರ್ಯ, ಬೀದಿ ದೀಪಗಳ ವ್ಯವಸ್ಥೆಯನ್ನು ರೋಟರಿ ವತಿಯಿಂದ ನಿರಂತರವಾಗಿ ಮಾಡುತ್ತಾ ಬರಲಾಗಿದೆ ಎಂದರು.
ದೂರದ ಗ್ರಾಮಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಬೆಂಗಳೂರು ರೋಟರಿ ಜಂಕ್ಷನ್ ಕ್ಲಬ್ ಸಹಯೋಗದೊಂದಿಗೆ 11 ಸೈಕಲ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಶಿವಪ್ಪ, ಪ್ರಕಾಶ್, ಮಹೇಶ್, ಲೋಕೇಶ್, ಮಧು, ದೀಪಕ್, ಬೆಂಗಳೂರು ಜಂಕ್ಷನ್ ಕ್ಲಬ್ ಕಾರ್ಯದರ್ಶಿ ಮನೀಶ, ಸದಸ್ಯರಾದ ವಿಕಾಸ್ ಅಗರ್ವಾಲ್, ನಿರ್ಮಲ್, ಪ್ರಮೀಳಾ ವೀರಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೀವ್, ಶಿಕ್ಷಕ್ಷಿ ವಿ.ಕೆ.ರಾಧಾ, ಸಂಸ್ಥೆಯ ಖಜಾಂಚಿ ಅನುಜ್ ಇದ್ದರು.