ಚಿರತೆ ದಾಳಿಗೆ ನಾಲ್ಕು ಕುರಿಗಳು ಸಾವು

Four sheep killed in leopard attack
Four sheep killed in leopard attack
Published on
ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ನಾಲ್ಕು ಕುರಿಗಳು ಮೃತಪಟ್ಟು, ಎರಡು ಕುರಿಗಳು ಗಾಯಗೊಂಡಿವೆ.
ಗ್ರಾಮದ ರೈತ ಶ್ರೀನಿವಾಸ್ ಅವರ ಕುರಿಗಳಾಗಿದ್ದು, ಮನೆಯ ಹಿಂಭಾಗದ ಕೊಟ್ಟಿಗೆಗೆ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ನುಗ್ಗಿದ ಚಿರತೆಯೊಂದು 18 ಕುರಿಗಳ ಪೈಕಿ 6 ಕುರಿಗಳ ಮೇಲೆ ದಾಳಿ ಮಾಡಿದೆ. ಕುರಿಗಳ ಚೀರಾಟದಿಂದ ಕೊಟ್ಟಿಗೆಗೆ ಬಂದ ಶ್ರೀನಿವಾಸ್ ಚಿರತೆ ದಾಳಿ ಮಾಡುತ್ತಿರುವುದು ಕಂಡುಆತಂಕಗೊಂಡು ಕೂಗಿಕೊಂಡ ಪರಿಣಾಮ ಚಿರತೆ ಅಲ್ಲಿಂದ ಪರಾರಿಯಾಗಿದೆ. ಆದರೆ, ಅಷ್ಟರಲ್ಲಾಗಲೇ 4 ಕುರಿಗಳು ಮೃತಪಟ್ಟಿದ್ದು, 2 ಕುರಿಗಳನ್ನು ಗಾಯಗೊಂಡಿದ್ದವು.
ತಾಲೂಕಿನಾದ್ಯಂತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರಾತ್ರಿಯ ವೇಳೆ ರೈತರು ಜಮೀನುಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ಅರಣ್ಯ ಅಧಿಕಾರಿಗಳು ಚಿರತೆ ಉಪಟಳ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಸೆರೆಗೆ ಅಗತ್ಯವಿರುವ ಕಡೆಗಳಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಬೋನು ಇರಿಸಲಾಗಿದೆ. ಇಲಾಖೆ ವತಿಯಿಂದ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net