ಕೆ.ಆರ್.ಸಾಗರದ ಕೆ.ಇ.ಆರ್.ಎಸ್ ಆವರಣದಲ್ಲಿನ ಹೆಲಿಪ್ಯಾಡ್ ಬಳಿ ಬೆಂಕಿ ಅವಘಡದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಅಗ್ನಿ ಶಾಮಕ ಸಿಬ್ಬಂದಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್, ಬಸವರಾಜು, ಕುಳ್ಳೇಗೌಡ, ಶಶಿಕಲಾ, ಗ್ರಾ.ಪಂ ಸಿಬ್ಬಂದಿ, ಶಾಲಾ ಶಿಕ್ಷಕರು ಇತರರು ಇದ್ದರು.
ಕೆ.ಆರ್.ಸಾಗರ:ಬೆಳಗೊಳ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಶ್ರೀರಂಗಪಟ್ಟಣ ಅಗ್ನಿಶಾಮಕ ದಳದ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮಕ್ಕಳಿಗೆ ಬೆಂಕಿ ಅವಘಡಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕೆ.ಆರ್.ಸಾಗರದ ಕೆಇಆರ್‌ಎಸ್ ಆವರಣದ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಿರಿಯ ನಾಗರಿಕರಾದ ರಾಮೇಗೌಡ ಮತ್ತು ಗೋಪಾಲ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಆಗ್ನಿಶಾಮಕ ದಳದ ಅಗ್ನಿ ಯೋಧರು ಬೆಂಕಿ ಅವಘಡದ ವಿವಿಧ ರೀತಿಯಲ್ಲಿ ಪ್ರಾತ್ಯಕ್ಷಿಕೆ ತೋರಿಸಿ ಅಪಾಯದಿಂದ ಪಾರಾಗುವುದು, ಬೆಂಕಿ ನಂದಿಸುವುದು, ಅಗ್ನಿ ಅವಘಡ ಸಂಭವಿಸಿದ ವೇಳೆ ಫೈರ್ ಫೈಟರ್‌ಗಳ ಪಾತ್ರದ ಕುರಿತು ಸಮಗ್ರವಾಗಿ ವಿವರಿಸಿದರು.
ಹಿರಿಯ ಅಗ್ನಿ ಫೈಟರ್ ತೋಜೋಮೂರ್ತಿ ನೇತೃತ್ವದ ತಂಡ ಮಕ್ಕಳಿಗೆ ಮನಮುಟ್ಟವ ರೀತಿಯಲ್ಲಿ ಗುಡಿಸಲಿಗೆ ಬೆಂಕಿ ತಗುಲಿದಾಗ, ಗ್ಯಾಸ್ ಸಿಲಿಂಡರ್ ಸೋರಿಕೆ ಇತರೆ ವಸ್ತುಗಳಿಗೆ ಬೆಂಕಿ ತಗುಲಿದಾಗ ನಂದಿಸುವ ಕ್ರಮಗಳ ಬಗ್ಗೆ ವಿವರಿಸಿತು.
ಕಾರ್ಯಕ್ರಮಕ್ಕೆ ಹುಲಿಕೆರೆ ಗ್ರಾಪಂ, ಕೆ.ಆರ್.ಸಾಗರ ಗ್ರಾ.ಪಂ, ಬೆಳಗೊಳ ಗ್ರಾ.ಪಂ ಮತ್ತು ಹೊಸಹಳ್ಳಿ ಗ್ರಾ.ಪಂ ಸಹಕಾರ ನೀಡಲಾಗಿತ್ತು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್, ಬಸವರಾಜು, ಕುಳ್ಳೇಗೌಡ, ಶಶಿಕಲಾ, ಗ್ರಾ.ಪಂ ಸಿಬ್ಬಂದಿ, ಶಾಲಾ ಶಿಕ್ಷಕರು ಇತರರು ಇದ್ದರು.