ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ಸಹಾಯ

ಮದ್ದೂರು ತಾಲೂಕಿನ ತೈಲೂರು ಗ್ರಾಮದ ದಂಡಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಸಿ.ಚಲುವರಾಜು ಉದ್ಘಾಟಿಸಿದರು. ಟಿ.ಆರ್.ಆತ್ಮಾನಂದ, ಬೋರಯ್ಯ, ಟಿ.ಸಿ.ರಘು, ಕೆ.ಎಂ.ರವಿ, ಜಯರಾಮು, ಬೊಮ್ಮಯ್ಯ, ನಾಗರಾಜು ಇದ್ದರು.

Published on
ಮದ್ದೂರು: ತಾಲೂಕಿನ ತೈಲೂರು ಗ್ರಾಮದ ದಂಡಮ್ಮ ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುವುದಾಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಸಿ.ಚಲುವರಾಜು ಭರವಸೆ ನೀಡಿದರು.
ತೈಲೂರು ಗ್ರಾಮದ ದಂಡಮ್ಮ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾದ್ದು, ದೇಗುಲಕ್ಕೆ ಹೋಗಿ ದೇವರನ್ನು ನೆನೆದರೆ ಜೀವನದಲ್ಲಿ ಒಂದು ರೀತಿ ನೆಮ್ಮದಿ ಸಿಗುತ್ತದೆ ಎಂದರು.
ತೈಲೂರು ಗ್ರಾಮಸ್ಥರ ಅಶೀರ್ವಾದದಿಂದ ತಾಲೂಕು ಪಂಚಾಯಿತಿ ಸದಸ್ಯನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಈಗ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದು, ತೈಲೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಜಿಪಂ ಮಾಜಿ ಸದಸ್ಯ ಬೋರಯ್ಯ, ಕನ್ನಡ ಜ್ಯೋತಿ ಸೇವಾ ಟ್ರಸ್ಟ್ ಪೋಷಕ ಟಿ.ಸಿ.ರಘು, ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿ ಕೆ.ಎಂ.ರವಿ ಮುಖಂಡರಾದ ಜಯರಾಮು, ಬೊಮ್ಮಯ್ಯ, ನಾಗರಾಜು, ಪ್ರೇಮರಾಜ್, ರವೀಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net