ರೈತರು ಸೌಲಭ್ಯ ಪಡೆದು ಸದೃಢರಾಗಿ

ಮದ್ದೂರು ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪ್ರಗತಿಪರ ರೈತರಿಗೆ ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿ ಪ್ರಧಾನವನ್ನು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ನಾಗರಾಜು ನೆರವೇರಿಸಿದರು. ಅಶೋಕ್, ಎಚ್.ಜಿ.ಪ್ರತಿಭಾ, ಸೋ.ಶಿ.ಪ್ರಕಾಶ್, ಟಿ.ಎಲ್.ವಿನೋದ್‌ಬಾಬು, ತಿಮ್ಮೇಶ್ ಇದ್ದರು.
ಮದ್ದೂರು ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪ್ರಗತಿಪರ ರೈತರಿಗೆ ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿ ಪ್ರಧಾನವನ್ನು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ನಾಗರಾಜು ನೆರವೇರಿಸಿದರು. ಅಶೋಕ್, ಎಚ್.ಜಿ.ಪ್ರತಿಭಾ, ಸೋ.ಶಿ.ಪ್ರಕಾಶ್, ಟಿ.ಎಲ್.ವಿನೋದ್‌ಬಾಬು, ತಿಮ್ಮೇಶ್ ಇದ್ದರು.
Published on
ಮದ್ದೂರು: ರೈತರು ಸರ್ಕಾರದಿಂದ ಸಿಗುವ ಹಲವಾರು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ತಿಳಿಸಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರಿಗೆ ಉತ್ಪಾದನೆ ಹೆಚ್ಚಿಸುವುದು, ಮಾರುಕಟ್ಟೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕಲ್ಪಿಸುವ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ರೈತರಿಗೆ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸಿ ಅರಿವು ಮೂಡಿಸುವ ಮೂಲಕ ಉತ್ತಮ ಬೆಳೆ ಬೆಳೆಯಲು ಪ್ರೇರೇಪಿಸಲಾಗುತ್ತಿದೆ ಎಂದರು.
ರೈತರು ಕಡಿಮೆ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಅಧಿಕ ಇಳುವರಿ ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕು. ಆಧುನಿಕ ಯುಗದಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಬೆಳೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪರಿಸರಕ್ಕೆ ಹಾನಿಯಾಗದ ಗೊಬ್ಬರಗಳನ್ನು ಬಳಕೆ ಮಾಡಬೇಕು. ಜತೆಗೆ ಸಮಗ್ರವಾಗಿ ನಿರ್ವಹಣೆ ಮಾಡುವುದರ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ವಿಜ್ಞಾನಿ ಡಾ.ಶಿವಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವ ಜತೆಗೆ ಜೇಡಿಮಣ್ಣಾಗಿ ಪರಿವರ್ತನೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಸಮಗ್ರ ಬೇಸಾಯ ಮತ್ತು ಸಾವಯವ ಬೇಸಾಯವನ್ನು ಬೆಳೆಯುವ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಪ್ರಶಸ್ತಿ ಪ್ರದಾನ: ತಾಲೂಕಿನ ಪ್ರಗತಿಪರ ರೈತರಾದ ಜಿ.ಎನ್.ಮಹೇಶ್, ನರಸಿಂಹಮೂರ್ತಿ, ಜಿ.ಸಿ.ಕೃಷ್ಣ, ಎ.ಎಸ್.ನಾಗೇಶ್, ಸಿ.ಕೃಷ್ಣಪ್ಪ, ಶಿವು ಅವರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಹಾಗೂ ಡಿ.ಪಿ.ಶೈಲೇಂದ್ರ, ರಂತಿಲ್‌ಕುಮಾರ್ ಅವರಿಗೆ ಜಿಲ್ಲಾ ಮಟ್ಟದ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಕೆ.ಬಿ.ನಾಗರಾಜು, ನಿರ್ದೇಶಕರಾದ ಸೋ.ಶಿ.ಪ್ರಕಾಶ್, ಟಿ.ಎಲ್.ವಿನೋದ್‌ಬಾಬು, ತಿಮ್ಮೇಶ್ ಹಾಗೂ ವಿವಿಧ ರೈತ ಉತ್ಪಾದಕರ ಸಂಘದ ಅಧ್ಯಕ್ಷರಾದ ತಿಮ್ಮೇಶ್, ಜಿ.ಸಿ.ಮಹೇಂದ್ರ, ಎನ್.ಟಿ.ಪುಟ್ಟಸ್ವಾಮಿ, ಚಿಕ್ಕೇಗೌಡ, ಕೃಷಿ ಉಪ ನಿರ್ದೇಶಕ ಆರ್.ಮುನೇಗೌಡ, ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ, ಡಾ.ರೇಷ್ಮ, ಹಿರಿಯ ತಾಂತ್ರಿಕ ಸಹಾಯಕ ಶಿವಕುಮಾರ್, ಅಧಿಕಾರಿಗಳಾದ ದಯಾನಂದ್‌ಕುಮಾರ್, ಕೆ.ಎನ್.ಕರುಣ, ರೂಪಶ್ರೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net